ADVERTISEMENT

'ಕಾಣೆಯಾದವರ ಪ್ರಕಟಣೆ' ಎಂಬ ಬಿಜೆಪಿ ಟೀಕೆಗೆ ಸಚಿವ ಪ್ರಿಯಾಂಕ್ ‌ಖರ್ಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 12:44 IST
Last Updated 26 ಸೆಪ್ಟೆಂಬರ್ 2025, 12:44 IST
<div class="paragraphs"><p>ಪ್ರಿಯಾಂಕ್ ಖರ್ಗೆ</p></div>

ಪ್ರಿಯಾಂಕ್ ಖರ್ಗೆ

   

ಕಲಬುರಗಿ: 'ಸೆಪ್ಟೆಂಬರ್ 15, 16, ಹಾಗೂ 17ರಂದು ಜಿಲ್ಲೆಯಲ್ಲೇ ಇದ್ದೆ. ಇಂದು ಸೆ.26. ಇಂದು‌ ಹಾಗೂ ನಾಳೆ ಜಿಲ್ಲೆಯಲ್ಲೇ ಇದ್ದೇನೆ‌. ಆದರೆ, ಬಿಜೆಪಿಯವರಿಗೆ ನನ್ನ ಹೆಸರು ತೆಗೆದುಕೊಳ್ಳದಿದ್ದರೆ ಪಕ್ಷದಲ್ಲಿ ಬಡ್ತಿ ಸಿಗಲ್ಲ. ರಾಜಕೀಯವಾಗಿ ಬೆಳೆಯಲ್ಲ, ಹೀಗಾಗಿ ಟೀಕಿಸುತ್ತಾರೆ'

'ಕಾಣೆಯಾದವರ ಪ್ರಕಟಣೆ' ಎಂದು‌ ಬಿಜೆಪಿ ಎಕ್ಸ್ ಖಾತೆಯಲ್ಲಿ ಮಾಡಿರುವ ಪೋಸ್ಟ್‌‌ ಕುರಿತ ಮಾಧ್ಯಮದವರ‌ ಪ್ರಶ್ನೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ‌ಖರ್ಗೆ ಮೇಲಿನಂತೆ ತಿರುಗೇಟು‌ ನೀಡಿದರು.

ADVERTISEMENT

ಜಿಲ್ಲೆಯ ‌ವಿವಿಧೆಡೆ ಪ್ರವಾಹ ಪರಿಸ್ಥಿತಿ ‌ಪರಿಶೀಲಿಸಿದ ಬಳಿಕ ಸೊನ್ನ ಬ್ಯಾರೇಜ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿ ಸರ್ಕಾರ‌ ಇದ್ದಾಗ ರೈತರಿಗಾಗಿ ಎಷ್ಟು ಬೆಳೆ ವಿಮೆ ಹಣ ಕೊಡಿಸಿದರು? ಎಷ್ಟು ಇನ್ ಪುಟ್ ಸಬ್ಸಿಡಿ ಕೊಡಿಸಿದ್ದಾರೆ, ಎಂಎಸ್ಪಿ ಕೊಡಿಸಿದ್ದಾರೆ ಎಂಬುದರ ಚರ್ಚೆಗೆ ಬರಲಿ' ಎಂದು ಸವಾಲು ಹಾಕಿದರು.

'ಬಿಜೆಪಿಯವರಿಗೆ ಜಿಲ್ಲೆಗೆ ಹೆಚ್ಚಿನ‌ ವಿಮೆ‌ ಹಣ ಕೊಡಿಸಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಗೂ ನನಗೆ ಬಂದು ಧನ್ಯವಾದಗಳನ್ನು ಬಿಜೆಪಿಯವರು ಹೇಳಿದ್ದಾರೆ. ಆ ಫೋಟೊವನ್ನೂ ಬಿಜೆಪಿಯವರು ಹಾಕಲಿ' ಎಂದು ಕಾಲೆಳೆದರು.

'ತಮಗೆ ಸಂಬಂಧಿಸದ ವಿಷಯಗಳಲ್ಲಿ ‌ಮೂಗು‌ ತೂರಿಸಿ ಎಕ್ಸ್‌ ಖಾತೆಯಲ್ಲಿ‌ ಪೋಸ್ಟ್ ಹಾಕುವ ಸಚಿವ ಪ್ರಿಯಾಂಕ್ ‌ಖರ್ಗೆ ತಮ್ಮ ಸ್ವಂತ ಉಸ್ತುವಾರಿಯ ಜಿಲ್ಲೆಯಾದ ಕಲಬುರಗಿಯಲ್ಲಿ ಪ್ರವಾಹ ಉಂಟಾದರೂ‌ ಕನಿಷ್ಠ ಎಕ್ಸ್‌ ಖಾತೆಯಲ್ಲಿ ಒಂದು ‌ಪೋಸ್ಟ್‌ ಸಹ ಮಾಡದ ಕಾಣೆಯಾಗಿದ್ದಾರೆ.ಇವರು ಕಂಡ ತಕ್ಷಣ ಕಲಬುರಗಿ ‌ಪ್ರವಾಹದ‌ ಮಾಹಿತಿ ನೀಡಿ' ಎಂದು ಬಿಜೆಪಿಯು‌ ಎಕ್ಸ್ ಖಾತೆಯಲ್ಲಿ ಸಚಿವ‌ ಪ್ರಿಯಾಂಕ್‌ ಚಿತ್ರ‌ಸಹಿತ‌ ಟ್ವೀಟ್‌ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.