ADVERTISEMENT

ಕಲಬುರ್ಗಿ: ಆಕ್ಸಿಜನ್‌ ಕೊರತೆಯಿಂದ 8 ರೋಗಿಗಳ ಸಾವು ಆರೋಪ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 17:44 IST
Last Updated 21 ಜುಲೈ 2020, 17:44 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

ಕಲಬುರ್ಗಿ: ‘ನಗರದ ಇಎಸ್ಐಸಿ ಆಸ್ಪತ್ರೆಯಲ್ಲಿ ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದ ಎಂಟು ರೋಗಿಗಳು ಆಕ್ಸಿಜನ್ ಕೊರತೆ
ಯಿಂದಾಗಿ ಸಾವಿಗೀಡಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಸರ್ಕಾರ ಇದನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿದೆಯೇ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

‘ಇಎಸ್‌ಐಸಿಯಲ್ಲಿ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿಲ್ಲ. ಏಕೆಂದರೆ ಅಲ್ಲಿನ ಸಮಸ್ಯೆಗಳು ಬಗೆಹರಿದಿಲ್ಲ. ಈ ವಿಷಯವನ್ನು ಯಾವ ಅಧಿಕಾರಿಯೂ ಖಚಿತಪಡಿಸುತ್ತಿಲ್ಲ; ನಿರಾಕರಿಸುತ್ತಲೂ ಇಲ್ಲ’ ಎಂದು ಅವರು ದೂರಿದ್ದಾರೆ.

ಈ ಆರೋಪವನ್ನು ಜಿಲ್ಲಾಧಿಕಾರಿ ಶರತ್ ಬಿ. ಹಾಗೂ ಇಎಸ್‌ಐಸಿ ಡೀನ್ ಡಾ. ಎ.ಎಲ್. ನಾಗರಾಜ್ ಅಲ್ಲಗಳೆದಿದ್ದಾರೆ. ‘ಆಕ್ಸಿಜನ್‌ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಅದನ್ನು ಸರಿಪಡಿಸಲಾಗಿದೆ. ಆದರೆ, ಇದರಿಂದಲೇ ರೋಗಿಗಳು ಸಾವಿಗೀಡಾಗಿಲ್ಲ’ ಎಂದು ನಾಗರಾಜ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.