ADVERTISEMENT

ಕೊನೆಗಳಿಗೆಯಲ್ಲಿ ರದ್ದಾದ ಪ್ರಿಯಾಂಕ್ ಭೇಟಿ

ಕಂದಾಯ ಸಚಿವರೊಂದಿಗೆ ಸಭೆಯಲ್ಲಿ ಭಾಗವಹಿಸಬೇಕಿದ್ದ ಸಚಿವ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 16:00 IST
Last Updated 30 ಜುಲೈ 2023, 16:00 IST

ಕಲಬುರಗಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಇದೇ 31ರಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿರುವ ಕಂದಾಯ ಇಲಾಖೆಯ ವಿಭಾಗ ಮಟ್ಟದ ‌ಸಭೆಯಲ್ಲಿ ಪಾಲ್ಗೊಳ್ಳಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಭೇಟಿ ಕೊನೆಗಳಿಗೆಯಲ್ಲಿ ರದ್ದಾಗಿದ್ದು, ಜುಲೈ 31ರ ಬದಲು ಆಗಸ್ಟ್ 1ರಂದು ಜಿಲ್ಲೆಗೆ ಬರಲಿದ್ದಾರೆ.

ಮೊದಲಿನ ಪ್ರವಾಸ ಪಟ್ಟಿಯಂತೆ ಸೋಮವಾರ ಬೆಂಗಳೂರಿನಿಂದ ನಸುಕಿನಲ್ಲಿ ಹೊರಟು ಹೈದರಾಬಾದ್‌ವರೆಗೆ ವಿಮಾನದಲ್ಲಿ ಬಂದು, ಅಲ್ಲಿಂದ ರಸ್ತೆಯ ಮೂಲಕ ಬೆಳಿಗ್ಗೆ 10.30ಕ್ಕೆ ಕಲಬುರಗಿಗೆ ಬರಬೇಕಿತ್ತು.

ಪರಿಷ್ಕೃತ ಪ್ರವಾಸ ಪಟ್ಟಿಯನ್ನು ಸಚಿವರ ಕಚೇರಿ ಬಿಡುಗಡೆ ಮಾಡಿದ್ದು, ಆಗಸ್ಟ್ 1ರಂದು ಬೆಳಿಗ್ಗೆ 9.40ಕ್ಕೆ ವಿಮಾನದ ಮೂಲಕ ಕಲಬುರಗಿಗೆ ಬರಲಿದ್ದಾರೆ.

ADVERTISEMENT

ಅಲ್ಲಿಂದ‌ ನೇರವಾಗಿ ಜಿಲ್ಲೆಯ ಚಿತ್ತಾಪುರ ಪಟ್ಟಣಕ್ಕೆ ತೆರಳುವ ಸಚಿವರು, ಬೆಳಿಗ್ಗೆ 10.30 ಗಂಟೆಗೆ ಚಿತ್ತಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಬೆಳಿಗ್ಗೆ 11.30 ರಿಂದ ಮಧ್ಯಾಹ್ಮ 3 ಗಂಟೆ ವರೆಗೆ ಚಿತ್ತಾಪೂರನಲ್ಲಿಯೇ ಇದ್ದು, ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗಿಯಾಗುವರು.

ಆಗಸ್ಟ್ 2ರಂದು‌ ನವದೆಹಲಿ ಪ್ರವಾಸ ಕೈಗೊಳ್ಳುವ ಸಚಿವರು, ಆಗಸ್ಟ್ 3ರಂದು ನವದೆಹಲಿಯಿಂದ ಮರಳಿ ಕಲಬುರಗಿಗೆ ಮಧ್ಯಾಹ್ನ 3.30ಕ್ಕೆ ಆಗಮಿಸಿ ನಗರದಲ್ಲಿಯೇ ವಾಸ್ತವ್ಯ ಮಾಡುವರು.

ಆಗಸ್ಟ್ 4ರಂದು ಕಲಬುರಗಿ ನಗರದಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಮತ್ತು ಅಗಸ್ಟ್ 5ರಂದು ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.