ADVERTISEMENT

ಕಲಬುರಗಿ | ವೈದ್ಯ ವಿದ್ಯಾರ್ಥಿನಿ ಕೊಲೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 16:12 IST
Last Updated 18 ಆಗಸ್ಟ್ 2024, 16:12 IST
ಕಲಬುರಗಿಯಲ್ಲಿ ಭಾನುವಾರ ಕೆಕೆಸಿಸಿಐ, ದಾಲ್‌ಮಿಲ್‌ ಅಸೋಸಿಯೇಷನ್ ಸೇರಿ ಇತರೆ ಸಂಘಟನೆಗಳ ಮುಖಂಡರು ಮೊಂಬತ್ತಿ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು
ಕಲಬುರಗಿಯಲ್ಲಿ ಭಾನುವಾರ ಕೆಕೆಸಿಸಿಐ, ದಾಲ್‌ಮಿಲ್‌ ಅಸೋಸಿಯೇಷನ್ ಸೇರಿ ಇತರೆ ಸಂಘಟನೆಗಳ ಮುಖಂಡರು ಮೊಂಬತ್ತಿ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು   

ಕಲಬುರಗಿ: ಕೋಲ್ಕತ್ತ ನಗರದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಭಾನುವಾರ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ), ದಾಲ್‌ಮಿಲ್‌ ಅಸೋಸಿಯೇಷನ್, ಆಹಾರ ಧಾನ್ಯ ಮತ್ತು ಬೀಜ ವರ್ತಕರ ಸಂಘ ಸೇರಿ ಇತರೆ ಸಂಘಟನೆಗಳ ಸದಸ್ಯರು ಮೊಂಬತ್ತಿ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಘೋಷಣೆಗಳನ್ನು ಕೂಗುತ್ತ ಕ್ಯಾಂಡಲ್, ನಾಮಫಲಕಗಳನ್ನು ಹಿಡಿದು ಕೃತ್ಯವನ್ನು ಖಂಡಿಸಿದರು.

ಇಂತಹ ಅಮಾನವೀಯ ಕೃತ್ಯಗಳು ಪದೇ ಪದೇ ನಡೆಯುತ್ತಿವೆ. ಕಾನೂನು ಮತ್ತು ಸುವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರಿಂದ ಜನಸಾಮಾನ್ಯರಲ್ಲಿ ಭಯ ಮತ್ತು ಆತಂಕ ಮೂಡಿದೆ. ಇಂತಹ ಘಟನೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕಠಿಣವಾದ ಶಿಕ್ಷೆ ವಿಧಿಸುವಂತೆ ಪ್ರಸ್ತುತ ಕಾನೂನಿಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.

ADVERTISEMENT

ಅಕ್ಕಿ ವ್ಯಾಪಾರಸ್ಥರು, ಕಿರಾಣಾ ಬಜಾರ್, ಬಟ್ಟೆ ವ್ಯಾಪಾರಸ್ಥರು, ಸರಾಫ್, ಔಷಧ ವ್ಯಾಪಾರಸ್ಥರು, ಎಣ್ಣೆ ಮಿಲ್ಲರ್ಸ್, ಕೃಷಿ ಪರಿಕರ ಮಾರಾಟಗಾರರು, ಸಣ್ಣ ಕೈಗಾರಿಕಾ ಮಾಲೀಕರು, ಬಾಂಡೆ ಬಜಾರ್, ಜಿ– 99 ಸಂಘಟನೆಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.