ADVERTISEMENT

ಹಿಂದೂ ಮುಖಂಡನ ಕೊಲೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 3:09 IST
Last Updated 16 ಫೆಬ್ರುವರಿ 2021, 3:09 IST
ನವದೆಹಲಿಯಲ್ಲಿ ಹಿಂದೂ ಸಂಘಟನೆ ಮುಖಂಡ ರಿಂಕು ಶರ್ಮಾ ಅವರನ್ನು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಹಿಂದೂ ರಕ್ಷಕ್ ಶಿವಾಜಿ ಬ್ರಿಗೇಡ್ ಸದಸ್ಯರು ಪ್ರತಿಭಟನೆ ನಡೆಸಿದರು
ನವದೆಹಲಿಯಲ್ಲಿ ಹಿಂದೂ ಸಂಘಟನೆ ಮುಖಂಡ ರಿಂಕು ಶರ್ಮಾ ಅವರನ್ನು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಹಿಂದೂ ರಕ್ಷಕ್ ಶಿವಾಜಿ ಬ್ರಿಗೇಡ್ ಸದಸ್ಯರು ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ನವದೆಹಲಿಯ ಹಿಂದೂ ಸಂಘಟನೆಯ ಕಾರ್ಯಕರ್ತ ರಿಂಕು ಶರ್ಮಾ ಅವರನ್ನು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ, ಗಲ್ಲಿಗೇರಿಸಬೇಕು ಎಂದು ಅಗ್ರಹಿಸಿ ಹಿಂದೂ ರಕ್ಷಕ್‌ ಶಿವಾಜಿ ಬ್ರಿಗೇಡ್‌ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ರಿಂಕು ಶರ್ಮಾ ಅವರು ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ಮಾಡುತ್ತಿದ್ದ ಸಂದರ್ಭದಲ್ಲಿ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದ್ದಾರೆ. ಇದನ್ನು ಸಹಿಸದೇ ಆರೋಪಿಗಳು ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಎಸ್‌ಡಿಪಿಐ, ಪಿಎಫ್‌ಐ ಮುಂತಾದ ಸಂಘಟನೆಗಳು ಇಂಥದ್ದೇ ಪ್ರಚೋದನಕಾರಿ ಘಟನೆಗಳಿಗೆ ಕಾರಣವಾಗಿವೆ. ಆದ್ದರಿಂದ ಈ ಸಂಘಟನೆಗಳನ್ನು ನಿಷೇಧಿಸಬೇಕು. ಹಿಂದೂಗಳ ಕೊಲೆ ಮಾಡಲು ಹೊಂಚು ಹಾಕಿದ ಮತಾಂಧರನ್ನು ಬಂಧಿಸಬೇಕು. ಇಲ್ಲದಿದ್ದರೆ ಮುಂದೆ ಇದು ಕೋಮುಗಲಭೆಗೆ ಪ್ರಚೋದನೆ ನೀಡುವ ಸಾಧ್ಯತೆ ಇದೆ ಎಂದೂ ದೂರಿದರು.

ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಗುರುಶಾಂತ ಪಿ. ಟೆಂಗಳಿ, ಮುಖಂಡರಾದ ಸಂತೋಷ ಬೆನಕನಳ್ಳಿ, ಶ್ರೀಶೈಲ ಮೂಲಗೆ, ಸುರೇಶ ತಳವಾರ, ಸಿದ್ದು ಅರಳಿ, ಶಿವು ಬಾಳಿ, ಶೇಖರ ಖಾನಾಪುರ, ರೋಹಿತ್‌ ಅರಳಿ, ಸುನೀಲ್‌ ಪಾಟೀಲ, ಸಂತೋಷ, ಅಣವೀರ, ಅಂಬರೀಶ್, ಶಿವು, ರಾಘವೇಂದ್ರ ಘಂಟೋಜಿ, ಧನರಾಜ, ಮಾಲು ಶಿವಣಗಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.