ADVERTISEMENT

ಅತಿವೃಷ್ಟಿಯಿಂದಾಗಿ ಬೆಳೆ ನಷ್ಟ: ರಾಜ್ಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 9:43 IST
Last Updated 26 ಸೆಪ್ಟೆಂಬರ್ 2025, 9:43 IST
<div class="paragraphs"><p>ರೈತರ ಪ್ರತಿಭಟನೆ</p></div>

ರೈತರ ಪ್ರತಿಭಟನೆ

   Prithvi

ಕಲಬುರಗಿ: ಜಿಲ್ಲೆಯ ಕಾಳಗಿ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಹಾಳಾಗಿ ರೈತರು ಕಂಗಲಾಗಿದ್ದಾರೆ. ಈ ರೈತರಿಗೆ ಪರಿಹಾರ ಘೋಷಣೆ ಸೇರಿದಂತೆ ವಿವಿಧಬೇಡಿಕೆಗಳಿಗೆ ಸರ್ಕಾರ ಕೂಡಲೇ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದಿಂದ ಶುಕ್ರವಾರ ಮಹಾಗಾಂವ ಕ್ರಾಸ್-ಕೋಡ್ಲಿ ನಡುವಿನ ರಟಕಲ್ ಗ್ರಾಮದಲ್ಲಿ ಎತ್ತಿನ ಬಂಡಿ, ಟ್ರ್ಯಾಕ್ಟರ್ ದೊಂದಿಗೆ ಮಳೆಯಲ್ಲೇ ಕೊಡೆ ಹಿಡಿದು ರಾಜ್ಯಹೆದ್ದಾರಿ 32ನ್ನು ತಡೆದು ಪ್ರತಿಭಟನೆ ಮಾಡಲಾಯಿತು.

ಕರ್ನಾಟಕ ‌ರಾಜ್ಯ ಪ್ರಾಂತ‌ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ‌ ಮಮಶೆಟ್ಟಿ ಮಾತನಾಡಿ, ಸರ್ಕಾರ ‌ಕೂಡಲೇ ಬೆಳೆವಿಮೆ ಬಾಕಿ ಮಂಜೂರು‌ ಮಾಡಬೇಕು. ಹಸಿಬರಗಾಲ ಘೋಷಣೆ, ರಟಕಲ್ ಗ್ರಾಮದಲ್ಲಿ ಅವೈಜ್ಞಾನಿಕ ಚರಂಡಿ ಸರಿಪಡಿಸಬೇಕು, ರಾಜ್ಯಹೆದ್ದಾರಿ ತಗ್ಗು ಗುಂಡಿ ಬಿದ್ದುದನ್ನು ದುರಸ್ತಿ ಮಾಡಿ ಎಂದು ಆಗ್ರಹಿಸಿದರು.

ADVERTISEMENT

ಸ್ಥಳಕ್ಕೆ ಕಾಳಗಿ ತಾಲ್ಲೂಕು ಪಂಚಾಯಿತಿ ಇಒ ಬಸಲಿಂಗಪ್ಪ ಡಿಗ್ಗಿ, ಕೋಡ್ಲಿ ಉಪತಹಸೀಲ್ದಾರ್ ರವೀಂದ್ರ ಭೇಟಿ ನೀಡಿ ಮನವಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.