ADVERTISEMENT

ಚಿಂಚೋಳಿ: ಮುಂದುವರಿದ ವರುಣನ ಕಾಟ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 16:03 IST
Last Updated 16 ಅಕ್ಟೋಬರ್ 2021, 16:03 IST
ಚಿಂಚೋಳಿ ತಾಲ್ಲೂಕು ತಾಜಲಾಪುರ ಬಳಿ ಅಡವಿಗೆ ಮೇಯಲು ಹೋಗಿದ್ದ ಜಾನುವಾರುಗಳು ಮಳೆ ಸುರಿದಿದ್ದರಿಂದ ಬೇಗನೇ ವಾಪಸ್ಸಾದವು
ಚಿಂಚೋಳಿ ತಾಲ್ಲೂಕು ತಾಜಲಾಪುರ ಬಳಿ ಅಡವಿಗೆ ಮೇಯಲು ಹೋಗಿದ್ದ ಜಾನುವಾರುಗಳು ಮಳೆ ಸುರಿದಿದ್ದರಿಂದ ಬೇಗನೇ ವಾಪಸ್ಸಾದವು   

ಚಿಂಚೋಳಿ: ತಾಲ್ಲೂಕಿನಲ್ಲಿ ಮಳೆಯ ಕಾಟ ಮುಂದುವರೆದಿದೆ. ಮಳೆಗಾಲ ಮುಗಿದರೂ ಮಳೆ ಸುರಿಯುವುದು ಮಾತ್ರ ನಿಲ್ಲುತ್ತಿಲ್ಲ ಇದರಿಂದ ರೈತರು ಕಂಗಾಲಾಗಿದ್ದಾರೆ.

ನಿರಂತರ ಮಲೆ ಸುರಿಯುತ್ತಿರುವುದರಿಂದ ಹೊಲಗಳಲ್ಲಿ ಕಳೆಯ ಕಾಟ ವಿಪರೀತವಾಗಿದೆ. ಇದರಿಂದ ಹಿಂಗಾರು ಬಿತ್ತನೆಯ ಚಿಂತೆ ರೈತರನ್ನು ಕಾಡುತ್ತಿದೆ.

ತಾಲ್ಲೂಕಿನ ಚಿಮ್ಮನಚೋಡ, ಸಲಗರ ಬಸಂತಪುರ, ಐನಾಪುರ, ಗಡಿಲಿಂಗದಳ್ಳಿ, ಚಂದನಕೇರಾ, ಕನಕಪುರ, ಚನ್ನೂರು, ಚಿಂಚೋಳಿ, ಸುಲೇಪೇಟ, ಕುಂಚಾವರಂ ಮೊದಲಾದ ಕಡೆ ಮಳೆ ಸುರಿದಿದೆ. ಆದರೆ ಕನಕಪುರ, ತಾಜಲಾಪುರ ಮತ್ತು ಗಾರಂಪಳ್ಳಿ ಮಧ್ಯೆ ಮಳೆ ಜೋರಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ADVERTISEMENT

ಪ್ರಸಕ್ತ ವರ್ಷ ನಿರಂತರ ಮಳೆಯಿಂದ ರೈತರ ಹೊಲಗಳು ಕಳೆಯಿಂದ ತುಂಬಿಹೋಗಿವೆ. ಹೊಲ ಹಸನು ಮಾಡಲು ಬಿಡುವು ನೀಡದೇ ಮಳೆ ಕಾಡುತ್ತಿರುವುದರಿಂದ ರೈತರು ಕಡಲೆ ಹಾಗೂ ಜೋಳ ಬಿತ್ತನೆ ಮಾಡದೇ ಮಳೆ ಯಾವಾಗ ನಿಲ್ಲುತ್ತದೆ ಎಂದು ಆಗಸ ನೋಡುತ್ತ ಕುಳಿತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.