ADVERTISEMENT

ಕಲಬುರಗಿ | ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 6:22 IST
Last Updated 26 ಜೂನ್ 2022, 6:22 IST
ಕಲಬುರಗಿ ನಗರದಲ್ಲಿ ಶನಿವಾರ ಸಂಜೆ ಸುರಿದ ಮಳೆಯಲ್ಲಿ ವಾಹನ ಸವಾರರು ಸಾಗಿದರು
ಕಲಬುರಗಿ ನಗರದಲ್ಲಿ ಶನಿವಾರ ಸಂಜೆ ಸುರಿದ ಮಳೆಯಲ್ಲಿ ವಾಹನ ಸವಾರರು ಸಾಗಿದರು   

ಕಲಬುರಗಿ: ಕಲಬುರಗಿ ನಗರ ಸೇರಿ ಅಫಜಲಪುರ, ಕಾಳಗಿ, ಯಡ್ರಾಮಿ, ಆಳಂದ ಮತ್ತು ಚಿತ್ತಾಪುರ ತಾಲ್ಲೂಕಿನ ವಿವಿಧೆಡೆ ಶನಿವಾರ ಮಳೆಯಾಯಿತು. ಕಲಬುರಗಿ ನಗರದಲ್ಲಿ ಮಧ್ಯಾಹ್ನ ಶುರುವಾದ ಮಳೆ ಸಂಜೆಯವರೆಗೆ ಮುಂದುರೆಯಿತು.

ಅಫಜಲಪುರ ತಾಲ್ಲೂಕಿನ ಗೋರಾ (ಬಿ)ಯಲ್ಲಿ 25 ಮಿ.ಮೀ., ಮತ್ತು ಗೊಬ್ಬರು ಗ್ರಾಮಗಳಲ್ಲಿ 22.50 ಮಿ.ಮೀ ಮಳೆಯಾಗಿದೆ. ಆಳಂದದಲ್ಲಿ 9.50ಮಿ.ಮೀ, ಜಿಡಗಾದಲ್ಲಿ 23 ಮಿ.ಮೀ, ಕೋರಳ್ಳಿ 13.50 ಮಿ.ಮೀ., ನಿರಗ್ಗುಡಿ 18 ಮಿ.ಮೀ., ನಿಂಬಾಳ 14ಮಿ.ಮೀ. ಮಳೆಯಾಯಿತು.

ಕಾಳಗಿಯಲ್ಲಿ 11.50 ಮಿ.ಮೀ., ಚಿಂಚೋಳಿಯ ಶಿರೊಳ್ಳಿಯಲ್ಲಿ 9 ಮಿ.ಮೀ., ಚಿತ್ತಾಪುರದ ಮುಗುಳನಾಗಾಂವನಲ್ಲಿ 7.50 ಮಿ.ಮೀ., ಕೊಡದೂರು– 6.50 ಮಿ.ಮೀ., ವಾಡಿ– 11.50 ಮಿ.ಮೀ. ಮಳೆ ಸುರಿಯಿತು. ‌

ADVERTISEMENT

ಕಲಬುರಗಿ ನಗರದ ಕಿಣ್ಣಿ ಸಡಕ್‌ ಪ್ರದೇಶದಲ್ಲಿ 75 ಮಿ.ಮೀ. ಮಳೆಯಾಯಿತು. ನಗರದ ರಸ್ತೆಯ ತಗ್ಗು ಗುಂಡಿ ಹಾಗೂ ಬದಿಯಲ್ಲಿ ನೀರು ನಿಂತು ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಅಡಚಣೆಯಾಯಿತು.

ಆನಂದ್ ಹೋಟೆಲ್ ವೃತ್ತ, ಮುಸ್ಲಿಂ ಚೌಕ, ಬಸ್‌ ನಿಲ್ದಾಣ, ಚಪ್ಪಲ್‌ ಬಜಾರ್‌, ದರ್ಗಾ ರೋಡ್‌, ಶಹಾಬಜಾರ್,ಐವಾನ್‌ ಇ ಶಾಹಿ ಮಾರ್ಗ, ಲಾಳಗೇರಿ ಕ್ರಾಸ್‌ ರಸ್ತೆಗಳಲ್ಲಿ ಚರಂಡಿಗಳು ತುಂಬಿಕೊಂಡು ನೀರು ರಸ್ತೆಯ ಮೇಲೆ ಹರಿಯಿತು.

ಭೂಪಲ ತೆಗ್ಗನೂರು 9 ಮಿ.ಮೀ., ಕುಸನೂರು 8.50 ಮಿ.ಮೀ., ನಂದಿಕೂರು 12.50 ಮಿ.ಮೀ., ಕಣದಾಳ 7.50 ಮಿ.ಮೀ., ಮರಗುತ್ತಿ 16 ಮಿ.ಮೀ. ಹಾಗೂ ಸಾವಳಗಿಯಲ್ಲಿ 12 ಮಿ.ಮೀ. ಮಳೆಯಾಯಿತು. ಭಾನುವಾರವೂ ಜಿಲ್ಲೆಯಹಲವೆಡೆ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.