
ಕಲಬುರಗಿ: ‘ಬಿಜೆಪಿ ಮತ್ತು ಹಿಂದೂ ಸಂಘಟನೆಯ ಮುಖಂಡರು ಜೇವರ್ಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ರಶೀದ್ ಮುತ್ಯಾ ಮೇಲೆ ಹಲ್ಲೆ ನಡೆಸಿ, ಕೊಲೆಗೆ ಯತ್ನ ಮಾಡಿದ್ದು ಖಂಡನೀಯ. ಹಲ್ಲೆ ಮಾಡಿದ ಇತರರನ್ನೂ ಪೊಲೀಸರು ಬಂಧಿಸಬೇಕು’ ಎಂದು ಭೀಮ್ ಆರ್ಮಿ ರಾಜ್ಯ ಘಟಕದ ಅಧ್ಯಕ್ಷ ಸಂತೋಷ ಬಿ.ಪಾಳಾ ಆಗ್ರಹಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾರಾಯಣಪುರ ಗ್ರಾಮದಲ್ಲಿ ಹಿಂದೂ– ಮುಸ್ಲಿಮರು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಬಿಜೆಪಿ, ಹಿಂದೂ ಮುಖಂಡರು ಜಾತಿಜಾತಿ ನಡುವೆ ಬೆಂಕಿ ಹಚ್ಚುವ ಕೆಲಸ ಬಿಡಬೇಕು. ರಶೀದ್ ಮುತ್ಯಾ ಸುಳ್ಳು ಹೇಳಿ, ಜನರಿಗೆ ತೊಂದರೆ ಮಾಡಿದ್ದರೆ ಕೇಸ್ ದಾಖಲಿಸಲಿ. ಗುಂಪು ಕಟ್ಟಿಕೊಂಡು ಹೋಗಿ ಮುತ್ಯಾ ಮತ್ತು ಅವರ ಸಂಗಡಿಗರ ಮೇಲೆ ಹಲ್ಲೆ ಮಾಡಿ ಗ್ರಾಮದಿಂದ ಓಡಿಸಲು ಇವರಿಗೆ ಅಧಿಕಾರ ಕೊಟ್ಟಿದ್ದು ಯಾರು?’ ಎಂದರು.
ಭೀಮ್ ಆರ್ಮಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸತೀಶ್ ಹುಗ್ಗಿ, ಜಿಲ್ಲಾಧ್ಯಕ್ಷ ಉದಯ ಖಣೆಗೆ, ನಾಗರಾಜ್ ಗಾಯಕವಾಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.