ADVERTISEMENT

ಕಲಬುರಗಿ: ‘ರಾಷ್ಟ್ರಕೂಟರ ಉತ್ಸವ ನೆಲದ ಸ್ವಾಭಿಮಾನ ಸಂಕೇತ’

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 5:42 IST
Last Updated 1 ಜನವರಿ 2026, 5:42 IST
ಸೇಡಂ ತಾಲ್ಲೂಕು ರಂಜೋಳ ಗ್ರಾಮದಲ್ಲಿ ಮಂಗಳವಾರ ನಡೆದ 14ನೇ ರಾಷ್ಟ್ರಕೂಟರ ಉತ್ಸವವನ್ನು ಸೇಡಂನ ಶಿವಶಂಕರ ಶಿವಾಚಾರ್ಯ ಉದ್ಘಾಟಿಸಿದರು
ಸೇಡಂ ತಾಲ್ಲೂಕು ರಂಜೋಳ ಗ್ರಾಮದಲ್ಲಿ ಮಂಗಳವಾರ ನಡೆದ 14ನೇ ರಾಷ್ಟ್ರಕೂಟರ ಉತ್ಸವವನ್ನು ಸೇಡಂನ ಶಿವಶಂಕರ ಶಿವಾಚಾರ್ಯ ಉದ್ಘಾಟಿಸಿದರು   

ಸೇಡಂ: ‘ರಾಷ್ಟ್ರಕೂಟರ ಉತ್ಸವವನ್ನು ಸರ್ಕಾರ ಹಂಪಿ ಮಾದರಿಯಂತೆ ಆಚರಿಸುವ ಮೂಲಕ ನೆಲದ ಇತಿಹಾಸವನ್ನು ಪರಿಚಯಿಸುವ ಕೆಲಸ ಮಾಡಬೇಕು. ಸರ್ಕಾರದ ಮಾಡದ ಕೆಲಸವನ್ನು ನಮ್ಮ ಸಂಘಟನೆ ಸ್ವಾಭಿಮಾನದಿಂದ ಮಾಡುತ್ತಿದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಅಭಿಪ್ರಾಯಪಟ್ಟರು.

ತಾಲ್ಲೂಕಿನ ರಂಜೋಳ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದಿಂದ ಮಂಗಳವಾರ ಆಯೋಜಸಿದ್ದ 14ನೇ ರಾಷ್ಟ್ರಕೂಟರ ಉತ್ಸವದಲ್ಲಿ ಅವರು ಮಾತನಾಡಿದರು.

‘ಸರ್ಕಾರದಿಂದ ಆಗದ ಕೆಲಸವನ್ನು ನಮ್ಮ ಸಂಘಟನೆಯ ಪದಾಧಿಕಾರಿಗಳು ಕಳೆದ 14 ವರ್ಷಗಳಿಂದ ಆಚರಿಸುತ್ತಾ ಬಂದಿರುವುದು ಶ್ಲಾಘನೀಯ’ ಎಂದರು.

ADVERTISEMENT

ರಾಷ್ಟ್ರಕೂಟ ರತ್ನ ಪ್ರಶಸ್ತಿ ಪ್ರದಾನ

ಶಿವಶಂಕರ ಶಿವಾಚಾರ್ಯ(ಧಾರ್ಮಿಕ), ಶಿವಯ್ಯಸ್ವಾಮಿ ಬಿಬ್ಬಳ್ಳಿ(ರಂಗಭೂಮಿ), ಡಾ.ಗೀತಾ ಪಾಟೀಲ(ಆರೋಗ್ಯ), ಶಿವಶರಣಪ್ಪ ಮುಗನೂರ(ಶಿಕ್ಷಣ) ಮತ್ತು ಕೇಶಪ್ಪ ನಾಯ್ಕಿನ್(ದೇಶಸೇವೆ) ಅವರಿಗೆ ರಾಷ್ಟ್ರಕೂಟ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಚಿಂಚೋಳಿಯ ನಂದಿತಾ ಮೆಲೋಡಿಸ್ ತಂಡದವರಿಂದ ರಸಮಂಜರಿ, ಗುಣವಂತ ಹುಗ್ಗಿ ಅವರಿಂದ ನಗೆ ಹಬ್ಬ, ತುಕಾರಾಂ ಅವರಿಂದ ಬೊಂಬೆ ಆಟ, ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಸೇಡಂನ ಶಿವಶಂಕರ ಶಿವಾಚಾರ್ಯ, ಸೈಯದ್ ಶಹಾ ಮುಸ್ತಫಾ ಖಾದ್ರಿ, ತಿಪ್ಪಯ್ಯ ಮುತ್ಯಾ, ಸತೀಶರೆಡ್ಡಿ ಪಾಟೀಲ್ ರಂಜೋಳ, ಮುಖ್ಯ ಅತಿಥಿಗಳಾಗಿ ಗ್ರೇಡ್-2 ತಹಶೀಲ್ದಾರ್ ಭೀಮಣ್ಣ ಕುದುರೆ, ಜೈಭೀಮ ಉಡಗಿ, ಭೀಮರೆಡ್ಡಿ ಜಿಲ್ಲೆಡಪಲ್ಲಿ, ಸಿಪಿಐ ಮಾದೇವಪ್ಪ ದಿಡ್ಡಿಮನಿ, ಪಿಎಸ್ಐ ಉಪೇಂದ್ರಕುಮಾರ, ಸಾಹಿತಿ ಮುಡುಬಿ ಗುಂಡೇರಾವ ಮತ್ತಿತರರಿದ್ದರು.

ಕ.ರ.ವೇ ತಾಲ್ಲೂಕು ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಚಂದ್ರಶೇಖರ ಪೂಜಾರಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.