ADVERTISEMENT

ನಾಗರಾಳ ಜಲಾಶಯದಿಂದ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 13:09 IST
Last Updated 22 ಜುಲೈ 2021, 13:09 IST
ಚಿಂಚೋಳಿ ತಾಲ್ಲೂಕು ನಾಗರಾಳ ಜಲಾಶಯದಿಂದ ನಿರಂತರವಾಗಿ ನೀರು ಹೊರ ಬಿಡುತ್ತಿರುವುದು
ಚಿಂಚೋಳಿ ತಾಲ್ಲೂಕು ನಾಗರಾಳ ಜಲಾಶಯದಿಂದ ನಿರಂತರವಾಗಿ ನೀರು ಹೊರ ಬಿಡುತ್ತಿರುವುದು   

ಚಿಂಚೋಳಿ: ತಾಲ್ಲೂಕಿನ ನಾಗರಾಳ ಜಲಾಶಯದಿಂದ ನದಿಗೆ ನಿರಂತರವಾಗಿ ನೀರು ಬಿಡಲಾಗುತ್ತಿದೆ. ಇದರಿಂದ ಇಡೀ ದಿನ ಮುಲ್ಲಾಮಾರಿ ನದಿಯಲ್ಲಿ ಬುಧವಾರ ಪ್ರವಾಹ ಗೋಚರಿಸಿತು.

ಜಲಾಶಯಕ್ಕೆ ಒಳ ಹರಿವು 2600 ಕ್ಯುಸೆಕ್ ಇದ್ದು, 3000 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. 490 ಮೀಟರ್ ನೀರಿನ ಮಟ್ಟ ಇದೆ. ಹೀಗಾಗಿ ರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಚಂದ್ರಂಪಳ್ಳಿ ಶೇ76 ಭರ್ತಿ: ಚಂದ್ರಂಪಳ್ಳಿ ಜಲಾಶಯ ಶೇ 76ರಷ್ಟು ಭರ್ತಿಯಾಗಿದೆ. ಬುಧವಾರ ಸಂಜೆಗೆ 1610 ಅಡಿಗೆ ನೀರು ಸಂಗ್ರಹಣೆಯ ಮಟ್ಟ ತಲುಪಿದೆ ಎಂದು ಎಇಇ ವೈಜನಾಥ ಅಲ್ಲುರೆ ತಿಳಿಸಿದ್ದಾರೆ.

ADVERTISEMENT

ಸಾಲೇಬೀರನಹಳ್ಳಿ ಕೆರೆಗೆ 2 ಮೀಟರ್ ನೀರು: ಸಾಲೇಬೀರನಹಳ್ಳಿ ಕೆರೆಗೆ ಒಂದೇ ದಿನ 2 ಮೀಟರ್ ನೀರು ಹರಿದು ಬಂದಿದೆ.

ಕೆರೆಯ ಗರಿಷ್ಠ ಮಟ್ಟ 47 ಅಡಿ ಇದ್ದು ಸದ್ಯ ಕೆರೆ ನೀರಿನ ಮಟ್ಟ 20 ಅಡಿ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.