ADVERTISEMENT

ಕಮಲಾಪುರ | ರಸ್ತೆ, ಸೇತುವೆ ದುರಸ್ತಿಗೆ ಕ್ರಮ: ಮತ್ತಿಮಡು

ನರೋಣಾ: ಸಮುದಾಯ ಭವನ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 6:39 IST
Last Updated 16 ಸೆಪ್ಟೆಂಬರ್ 2025, 6:39 IST
ಕಮಲಾಪುರ ಸಮೀಪದ ನರೋಣ ಕ್ಷೇಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸಮುದಾಯ ಭವನ ಕಾಮಗಾರಿಗೆ ಶಾಸಕ ಬಸವರಾಜ ಮತ್ತಿಮಡು ಚಾಲನೆ ನೀಡಿದರು
ಕಮಲಾಪುರ ಸಮೀಪದ ನರೋಣ ಕ್ಷೇಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸಮುದಾಯ ಭವನ ಕಾಮಗಾರಿಗೆ ಶಾಸಕ ಬಸವರಾಜ ಮತ್ತಿಮಡು ಚಾಲನೆ ನೀಡಿದರು   

ಕಮಲಾಪುರ (ನರೋಣಾ): ‘ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಸ್ತೆ ಸೇತುವೆಗಳು ಕೊಚ್ಚಿಹೋಗಿದ್ದು, ಕೂಡಲೆ ದುರಸ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ಶಾಸಕ ಬಸವರಾಜ ಮತ್ತಿಮಡು.

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ನರೋಣಾ ಕ್ಷೇತ್ರ ಪಾಳ್ಯದ ಕ್ಷೇಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ₹1 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರು ಸಮುದಾಯ ಭವನ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

‘ಕ್ಷೇತ್ರದ ಅನೇಕ ಕಡೆಗಳಲ್ಲಿ ರಸ್ತೆ, ಸೇತುವೆ, ಮನೆಗಳು ಸೇರಿದಂತೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಪರಿಹಾರ ಒದಗಿಸಲು ಒತ್ತಾಯಿಸಲಾಗುವುದು’ ಎಂದರು.

ADVERTISEMENT

ಅತಿಯಾಗಿ ಮಳೆ ಸುರಿದು ಶಿಥಿಲಗೊಂಡ ಚಿಂಚನಸೂರು ಸೇತುವೆ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಲಘು ಭೂಕಂಪನ ಸಂಭವಿಸಿದರೆ ಹಿನ್ನೆಲೆಯಲ್ಲಿ ಅಧಿಕಾರಿಗಳು, ಗ್ರಾಮಸ್ಥರೊಂದಿಗೆ ಚರ್ಚಿಸಿ ಆತಂಕಗೊಳ್ಳದಳಂತೆ ಧೈರ್ಯದಿಂದ ಇರುವಂತೆ ತಿಳಿಸಿರು.

ಬಬಲಾದನ ಗುರುಪಾದಲಿಂಗ ಶಿವಯೋಗಿ, ನರೋಣಾದ ಗುರುಮಹಾಂತ ಶಿವಾಚಾರ್ಯ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಗಂಗಪ್ಪ ಗೌಡ ಪಾಟೀಲ, ಮಾಜಿ ಅಧ್ಯಕ್ಷ ಸಂಗಮೇಶ ವಾಲಿ, ಬಾಬು ವಾಲಿ, ರೇವಣಸಿದ್ದಪ್ಪ ಮೂಲಗೆ, ಶಿವಶಂಕರ ವಾಲಿ, ಪ್ರಭು ಹೀರಾ, ಶಿವಾನಂದ ಬೋಳಶೆಟ್ಟಿ, ಬಸವರಾಜ ಚಕ್ಕಿ, ಮಂಜುನಾಥ ಕೋರಿ, ಯಲ್ಲಾಲಿಂಗ ಯಳಸಂಗಿ, ಗುರಸಿದ್ಧಯ್ಯ ಮಠಪತಿ, ಸಂಜುಕುಮಾರ ಹೀರಾ, ಶಂಭುಲಿಂಗ ಢೋಂಕಿ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.