ADVERTISEMENT

ಕಮಲಾಪುರ | ಜಾತಿಗಣತಿ ಹೆಸರಲ್ಲಿ ಜಾತಿಯತೆಗೆ ಕುಮ್ಮಕ್ಕು ಗಿರೀಶ ಹೆಬ್ಬಾರ ಖೇದ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 3:11 IST
Last Updated 12 ಅಕ್ಟೋಬರ್ 2025, 3:11 IST
ಕಮಲಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಶನಿವಾರ ಪಥ ಸಂಚಲನ ನಡೆಸಿದರು
ಕಮಲಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಶನಿವಾರ ಪಥ ಸಂಚಲನ ನಡೆಸಿದರು   

ಕಮಲಾಪುರ: ‘ಜಾತಿಗಣತಿಯಲ್ಲಿ 1561 ಜಾತಿಗಳ ಪಟ್ಟಿ ಸೇರಿಸಿರುವ ರಾಜ್ಯ ಸರ್ಕಾರ ಜಾತಿ ಗಣತಿ ಹೆಸರಲ್ಲಿ ಜಾತಿಯತೆಗೆ ಕುಮ್ಮಕ್ಕು ನೀಡುತ್ತಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಹ ಸಂಘ ಚಾಲಕ ಗಿರೀಶ ಹೆಬ್ಬಾರ ಖೇದ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಹಾಗೂ ವಿಜಯ ದಶಮಿ ಉತ್ಸವ ಸಮಾರಂಭದಲ್ಲಿ ಮಾತನಾಡಿದರು.

‘ಮನುಕುಲವೊಂದೆ ಎಂದು ಹೇಳು ಸರ್ಕಾರವೆ ಜಾತಿ ಹೆಸರಲ್ಲಿ ಸಮಾಜ ವಿಭಜಿಸುತ್ತಿದೆ. ಆರ್‌ಎಸ್‌ಎಸ್‌ ಸಮಾಜ ಒಗ್ಗೂಡಿಸುವ ಕೆಲಸ ಮಾಡುತ್ತದೆ. ವಿಷಮ ಪರಿಸ್ಥಿಗಳಲ್ಲಿ ಸೇವೆ ಒದಗಿಸುತ್ತದೆ. ಭಾರತೀಯ ಮಜದೂರ ಸಂಘ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತ, ಸಂಸ್ಕೃತ ಭಾರತಿ, ಸೇವಾ ಭಾರತಿ ಸೇರಿದಂತೆ 52 ಅಖಿಲ ಭಾರತ ಮಟ್ಟದ ಸಂಘಟನೆಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತವೆ’ ಎಂದು ಹೇಳಿದರು.

ADVERTISEMENT

ಸ್ವದೇಶಿ, ಸಾವಯವ, ಅವಿಭಕ್ತ ಕುಟುಂಬ, ನಾಗರಿಕ ಕರ್ತವ್ಯವನ್ನು ಪ್ರೇಪಿಸುವುದು ಸಂಘದ ಧ್ಯೆಯವಾಗಿದೆ ಎಂದರು.

ಸೊಂತ ಅಭಿನವ ಶರಣ ಶಂಕರಲಿಂಗ ಮಹಾರಾಜ, ಸಂಘದ ವಿಭಾಗೀಯ ಪ್ರಚಾರಕ ವಿಜಯ ಮಹಾಂತೇಶ, ಜಿಲ್ಲಾ ಕಾರ್ಯವಾಹಕ ಮಲ್ಲಿನಾಥ ಅವರಾದಿ, ಅಂಬ್ರೀಶ ಜಾಲಳ್ಳಿ, ಸೂರ್ಯಕಾಂತ ಢೋಣಿ, ರವಿ ಬಿರಾದಾರ, ಗೋರಖನಾಥ ಶಾಖಾಪೂರ, ಮಲ್ಲಿಕಾರ್ಜುನ ಮರತೂರಕರ್, ಶಿವಾ ದೋಶೆಟ್ಟಿ, ಉದಯ ರಟಕಲ್, ಪ್ರದೀಪ ಭಾಲ್ಕಿ, ಗುಂಡುರೆಡ್ಡಿ, ಚೆನ್ನಬಸಪ್ಪ ಮುನ್ನಳಿ, ಶಿವರಾಜ ಧಟ್ಟಿ, ಗುಂಡು ದೋಶೆಟ್ಟಿ, ವಿನೋದ ಮಾಟೂರ, ನಾಗರಾಜ ಕೋರಿ, ಸಂತೋಷ ಮುಗಳಿ, ಸುರೇಶ ರಾಠೋಡ, ಜಗನ್ನಾಥ ಮಾಲಿಪಾಟೀಲ, ಶರಣು ರಟಕಲ್, ಚೆನ್ನು ಸ್ವಾಮಿ, ಜ್ಯೋತೀರ್ಮಯ ಖಡಕೆ, ವಿಜಯಕುಮಾರ ಸುಗೂರ, ಶಶಿ ಮಾಟೂರ, ಸುಧಾಕರ ಕುಂಬಾರ, ವೀರೇಶ ಪಾಟೀಲ, ಸತೀಶ ಸೊರಡೆ ಮತ್ತಿತರರು ಇದ್ದರು.

ರಾಷ್ಟ್ರೀಯತೆ ತನ್ನ ಧ್ಯೇಯವಾಗಿಸಿಕೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಾರ್ವಜನಿಕರನ್ನು ಸತ್ಪ್ರಜೆಗಳನ್ನಾಗಿ ಸಮೃದ್ಧ ಭಾರತ ಸೃಷ್ಟಿಸುವಲ್ಲಿ ಮಹತ್ತರ ಕೊಡುಗೆ ನೀಡುತ್ತಿದೆ
ಶಂಕರಲಿಂಗ ಮಹಾರಾಜ ದತ್ತದಿಗಂಬರ ಮಾಣಿಕೇಶ್ವರ ಮಠ ಸೊಂತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.