ಪೊಲೀಸ್
(ಸಾಂದರ್ಭಿಕ ಚಿತ್ರ)
ಶಹಾಬಾದ್: ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ರಾತ್ರಿ ನಕಲಿ ಕೀ ಬಳಸಿ, ಶಾಲೆಯ ಎರಡು ಕೋಣೆಗಳ ಬಾಗಿಲು ತೆರೆದು ತಾಂತ್ರಿಕ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದು, ಅಲಮಾರಿ ಬೇಗ ಮರೆತು ದಾಖಲೆ ಹರಿದು ಹಾಕಿದ್ದಾರೆ.
ಶಾಸಕರ ದತ್ತು ಶಾಲೆಯಾಗಿರುವ ಈ ಶಾಲೆಯ ಆವರಣದಲ್ಲಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ, ಸರ್ಕಾರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಮಂಗಳವಾರ ರಾತ್ರಿ ಕಳ್ಳರು ಶಾಲೆಯ ಶಿಕ್ಷಕರ ಕೋಣೆಯ ಬಾಗಿಲಿಗೆ ಹಾಕಿದ ಬೀಗವನ್ನು ನಕಲಿ ಕೀಯಿಂದ ತೆಗೆದು ಒಳಗೆ ಮುಖ್ಯೋಪಾಧ್ಯಾರ ಮೇಜಿನ ಡ್ರಾ ನಲ್ಲಿನ ಅಲಮಾರಿಗಳ ಕೀಲಿ ತೆಗೆದು, ನಾಲ್ಕು ಅಲಮಾರಿಯಲ್ಲಿ ಸಾಮಗ್ರಿಗಳನ್ನು ಕೆಳಗೆ ಹಾಕಿ ತಡಕಾಡಿದ್ದಾರೆ. ಇಲ್ಲಿರುವ ಕೆಲ ದಾಖಲೆಗಳನ್ನು ಹರಿದು ಹಾಕಿದ್ದು, ಕೆಲ ದಾಖಲೆಗಳು ಹೊತ್ತೊಯ್ದಿದ್ದಾರೆ.
ಶಾಲೆಯ ಮೊದಲ ಮಹಡಿಯಲ್ಲಿರುವ ಕೋಣೆ ಬೀಗವನ್ನು ತೆಗೆದು ಅಲ್ಲಿಯೂ ಹುಡುಕಾಡಿದ್ದಾರೆ. ಒಟ್ಟು ಎರಡು ಕೋಣೆಯಲ್ಲಿದ್ದ ಎರಡು ಸಿಪಿಯು, ಎರಡು ಮೋನಿಟರ್, ಒಂದು ಕಂಪ್ಯೂಟರ್ ಕೀ ಬೋರ್ಡ, ಒಂದು ಎಂಪ್ಲೀಫೈಯರ್, ಒಂದು ತೂಕದ ಯಂತ್ರ ಕಳ್ಳತ ಮಾಡಿದ್ದಾರೆ. ಹೋಗುವಾಗ ಶಿಕ್ಷಕ ಕೋಣೆ ಬಾಗಿಲು ಮುಚ್ಚಿ ಮೊದಲಿದ್ದಂತೆ ಕೀಲಿ ಹಾಕಿದ್ದಾರೆ. ಅಲ್ಲಿಯೇ ಒಂದಿಷ್ಟು ಕೀಲಿ ಕೈಗಳಿರುವ ಗೊಂಚಲನ್ನು, ಮೇಲಿನ ಎರಡು ಕೋಣೆಯ ಬಾಗಿಲು ತೆರೆದು ಬೀಗವನ್ನು, ಅದರ ಜೊತೆಗೆ ಕಳ್ಳತನ ನಡೆಸಲು ಎರಡುಮೂರು ಬೀಗದ ಕೈಗಳ ಗೊಂಚಲನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.
ಸದರಿ ಶಾಲೆಯಲ್ಲಿ ಹಿಂದೆಯೂ ಎರಡು ಬಾರಿ ಕಳ್ಳತ ನಡೆದಿತ್ತು. ಒಂದು ಬಾರಿ ನಕಲಿ ಕೋಣೆಯ ಸಾಮಗ್ರಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಅದರೆ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ, ಪ್ರಕರಣ ದಾಖಲಿಸಿರಲಿಲ್ಲ. ಈ ಬಾರಿ ಕಳ್ಳತನ ನಡೆದಿದ್ದರಿಂದ ಪ್ರಭಾರಿ ಮುಖ್ಯಶಿಕ್ಷಕಿ ಈರಮ್ಮಾ ಅವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಸ್ಥಳಕ್ಕೆ ಪಿಐ ನಟರಾಜ ಲಾಡೆ, ಪಿಎಸ್‌ಐ ಶ್ಯಾಮರಾವ, ಪಿಸಿ, ಹುಸೇನ ಪಾಶಾ ಭೇಟ್ಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷ ಭೀಮಾಶಂಕರ ಕಾಂಬಳೆ, ಕರಾದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಪ್ಪ ಕರಣಿಕ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.