ADVERTISEMENT

ಹೈದರಾಬಾದ್‌ನಲ್ಲಿ ಸೇಡಂನ ಐವರು ಸಂಶಯಾಸ್ಪದ ರೀತಿಯಲ್ಲಿ ಸಾವು

ದುಡಿಮೆಗಾಗಿ ಹೈದರಾಬಾದ್‌ಗೆ ತೆರಳಿದ್ದ ಕುಟುಂಬ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 21:22 IST
Last Updated 21 ಆಗಸ್ಟ್ 2025, 21:22 IST
<div class="paragraphs"><p>ಸಾವು</p></div>

ಸಾವು

   

ಪ್ರಾತಿನಿಧಿಕ ಚಿತ್ರ

ಸೇಡಂ (ಕಲಬುರಗಿ ಜಿಲ್ಲೆ): ದುಡಿಮೆಗಾಗಿ ಹೈದರಾಬಾದ್‌ಗೆ ತೆರಳಿದ್ದ ಸೇಡಂ ತಾಲ್ಲೂಕಿನ ಒಂದೇ ಕುಟುಂಬದ ಐವರು ಸಂಶಯಾಸ್ಪದ ರೀತಿಯಲ್ಲಿ ಹೈದರಾಬಾದ್‌ನ ಮಿಯಾಪುರ ಪ್ರದೇಶದ ಮನೆಯಲ್ಲಿ ಮೃತಪಟ್ಟಿರುವುದು ಗುರುವಾರ ಬೆಳಕಿಗೆ ಬಂದಿದೆ.

ADVERTISEMENT

ತಾಲ್ಲೂಕಿನ ರಂಜೋಳ ಗ್ರಾಮದ ಲಕ್ಷ್ಮಯ್ಯ ಉಪ್ಪಾರ (60), ಪತ್ನಿ ವೆಂಕಟಮ್ಮ ಉಪ್ಪಾರ (55), ಅನಂತಪುರ ಗ್ರಾಮದ, ಅಳಿಯ ಅನಿಲ ಉಪ್ಪಾರ(32), ಲಕ್ಷ್ಮಯ್ಯ ಅವರ ಪುತ್ರಿ ಕವಿತಾ ಉಪ್ಪಾರ (24) ಮತ್ತು ಅವರ ಮೊಮ್ಮಗ ಅಪ್ಪು ಉಪ್ಪಾರ (2) ಮೃತಪಟ್ಟಿದ್ದಾರೆ. 

ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಈ ಸಂಬಂಧ ಹೈದರಾಬಾದ್‌ನ ಮಿಯಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಲಕ್ಷ್ಮಯ್ಯ ಕುಟುಂಬದ ಎಲ್ಲರೂ ಬುಧವಾರ ರಾತ್ರಿ ಊಟ ಮಾಡಿ ಮಲಗಿದ್ದರು. ಬೆಳಗಾಗುವಷ್ಟರಲ್ಲಿ ಎರಡು ವರ್ಷದ ಮಗು ಸೇರಿ ಐವರು ಒಟ್ಟಿಗೆ ಅಸುನೀಗಿದ್ದಾರೆ’ ಎಂದು ರಂಜೋಳ ಗ್ರಾಮಸ್ಥರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕೆಲಸಕ್ಕಾಗಿ ಹೈದರಾಬಾದ್‌ಗೆ

ತಾಲ್ಲೂಕಿನ ರಂಜೋಳ ಗ್ರಾಮದ ಲಕ್ಷ್ಮಯ್ಯ ದಂಪತಿ ಅನೇಕ ವರ್ಷಗಳಿಂದ ಕೆಲಸಕ್ಕಾಗಿ ಹೈದರಾಬಾದ್‌ಗೆ ತೆರಳುತ್ತಿದ್ದರು. ಹೈದರಾಬಾದ್‌ನ ಮಿಯಾಪುರದಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಲಕ್ಷ್ಮಯ್ಯನವರಿಗೆ ಒಟ್ಟು ನಾಲ್ವರು ಮಕ್ಕಳು. ಒಬ್ಬ ಪುತ್ರ, ಮೂವರು ಪುತ್ರಿಯರು.

‘2ನೇ ಮಗಳು ಕವಿತಾ ಅವರನ್ನು ಅನಂತಪುರದ ಅನಿಲ ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆಗಾಗ ಲಕ್ಷ್ಮಯ್ಯ ದಂಪತಿ ರಂಜೋಳ ಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಈಚೆಗೆ ನಡೆದ ಮೊಹರಂ ಆಚರಣೆ ವೇಳೆ ಕುಟುಂಬ ಸಮೇತ ಬಂದಿದ್ದರು’ ಎಂದು ಗ್ರಾಮಸ್ಥರು ಹೇಳಿದ್ದಾರೆ.

ವೆಂಕಟಮ್ಮ
ಅನಿಲ
ಕವಿತಾ
ಅಪ್ಪು

ಲಕ್ಷ್ಮಯ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.