ADVERTISEMENT

ಗ್ರಾಮ ಪಂಚಾಯಿತಿ; 2 ಬಿಜೆಪಿ, 1 ಕಾಂಗ್ರೆಸ್ ತೆಕ್ಕೆಗೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2023, 13:57 IST
Last Updated 4 ಆಗಸ್ಟ್ 2023, 13:57 IST
ಸೇಡಂ ತಾಲ್ಲೂಕು ಚಂದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶೈಲಜಾ ಮದಪ್ಪ ಆಯ್ಕೆಯಾಗಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು
ಸೇಡಂ ತಾಲ್ಲೂಕು ಚಂದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶೈಲಜಾ ಮದಪ್ಪ ಆಯ್ಕೆಯಾಗಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು   

ಸೇಡಂ: ತಾಲ್ಲೂಕಿನ 3 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ 2 ಗ್ರಾಮ ಪಂಚಾಯಿತಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ವಶವಾದರೆ, ಒಂದು ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೇಲುಗೈ ಸಾಧಿಸಿದರು.

ಚಂದಾಪುರಗೆ ಶೈಲಜಾ ಅಧ್ಯಕ್ಷೆ: ಚಂದಾಪುರ ಗ್ರಾ.ಪಂಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶೈಲಜಾ ಮದಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಶೇಖರ್ ಕಲಾಲ್ ಮತ್ತು ವೆಂಕಟಮ್ಮ ನರೇಶ ನಾಮಪತ್ರ ಸಲ್ಲಿಸಿದ್ದರು. ವೆಂಕಟಮ್ಮ ನರೇಶ ಅವರ ನಾಮಪತ್ರ ತಿರಸ್ಕೃತವಾಗಿದ್ದರಿಂದ, ಶೇಖರ ಕಲಾಲ್ ಅವರನ್ನು ಚುನಾವಣಾಧಿಕಾರಿ ಉಪಾಧ್ಯಕ್ಷರಾಗಿ ಪ್ರಕಟಿಸಿದರು.

ADVERTISEMENT

ಕೋಡ್ಲಾಗೆ ಲಕ್ಷ್ಮೀ ಅಧ್ಯಕ್ಷೆ: ಕೋಡ್ಲಾ ಗ್ರಾ.ಪಂಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಲಕ್ಷ್ಮೀ ಮಾರುತಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀ ಮತ್ತು ಮನೋಹರ ಹಣಮಂತ ನಾಮಪತ್ರ ಸಲ್ಲಿಸಿದ್ದರು. ಲಕ್ಷ್ಮೀ ಅವರು 9 ಮತ ಪಡೆದರೆ, 8 ಮತ ಪಡೆದ ಮನೋಹರ ಪರಾಭವಗೊಂಡರು. ರವಿರಾಜ ಮುಡಬೂಳಕರ್ ಚುನಾವಣಾಧಿಕಾರಿಯಾಗಿದ್ದರು.

ದುಗನೂರಿಗೆ ನಾಗಮ್ಮ ಅಧ್ಯಕ್ಷೆ: ದುಗನೂರು ಗ್ರಾ.ಪಂಗೆ‌ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಾಗಮ್ಮ ಜಗದೇವಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನಾಗಮ್ಮ ಜಗದೇವಪ್ಪ ಮತ್ತು ನಾಗೇಂದ್ರಪ್ಪ ಬಸಣ್ಣ ನಾಮಪತ್ರ ಸಲ್ಲಿಸಿದ್ದರು. ನಾಗಮ್ಮ 10 ಮತ ಪಡೆದರೆ, 8 ಮತ ಪಡೆದ ನಾಗೇಂದ್ರಪ್ಪ ಪರಾಭವಗೊಂಡರು. ಒಂದು ಮತ ತಿರಸ್ಕೃತವಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಸಾವಿತ್ರಮ್ಮ ಲಕ್ಷ್ಮಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಕಲ್ಯಾಣಕುಮಾರ ಅವಿರೋಧ ಪ್ರಕಟಿಸಿದರು.

ಸೇಡಂ ತಾಲ್ಲೂಕು ಕೋಡ್ಲಾ ಗ್ರಾಮ ಪಂಚಾಯಿತಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಲಕ್ಷ್ಮೀ ಮಾರುತಿ ಅಧ್ಯಕ್ಷರಾಗುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.