ADVERTISEMENT

ಸೇಡಂ: ಕಾರ್ಮಿಕ ಸಾವು, ಪರಿಹಾರಕ್ಕಾಗಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 7:13 IST
Last Updated 20 ಆಗಸ್ಟ್ 2025, 7:13 IST
<div class="paragraphs"><p>ಸೇಡಂ ತಾಲ್ಲೂಕು ಮಳಖೇಡ ರಾಜಶ್ರೀ ಸಿಮೆಂಟ್ ಕಂಪೆನಿಯಲ್ಲಿ ಮಳಖೇಡ ಗ್ರಾಮದ ಕಾರ್ಮಿಕ ಅಂಬರೀಷ ಬೊಮ್ನಳ್ಳಿ ಮೃತಪಟ್ಟ ಹಿನ್ನೆಲೆ ಕಂಪನಿ ಗೇಟ್‌ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು</p></div>

ಸೇಡಂ ತಾಲ್ಲೂಕು ಮಳಖೇಡ ರಾಜಶ್ರೀ ಸಿಮೆಂಟ್ ಕಂಪೆನಿಯಲ್ಲಿ ಮಳಖೇಡ ಗ್ರಾಮದ ಕಾರ್ಮಿಕ ಅಂಬರೀಷ ಬೊಮ್ನಳ್ಳಿ ಮೃತಪಟ್ಟ ಹಿನ್ನೆಲೆ ಕಂಪನಿ ಗೇಟ್‌ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು

   

ಸೇಡಂ: ತಾಲ್ಲೂಕಿನ ಮಳಖೇಡ ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ ಸೋಮವಾರ ತಡರಾತ್ರಿ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ. 

ಮಳಖೇಡ ಗ್ರಾಮದ ಅಂಬರೀಷ ಬೊಮ್ನಳ್ಳಿ (32) ಮೃತ ದುರ್ದೈವಿ. ಕಂಪನಿಯಲ್ಲಿ ಕಲ್ಲುಗಣಿಯಲ್ಲಿನ ಟಿಪ್ಪರ್ ಚಾಲಕನಾಗಿದ್ದ. ಮಳೆಯಿಂದಾಗಿ ಟಿಪ್ಪರ್ ಕೆಸರಿನಲ್ಲಿ ಸಿಕ್ಕಿಬಿದ್ದಿತ್ತು. ಟಿಪ್ಪರ್ ತೆಗೆಯಲು ಹೋದಾಗ ಲೋಡರ್ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ADVERTISEMENT

ಕಾರ್ಮಿಕ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಮಂಗಳವಾರ ಬೆಳಿಗ್ಗೆ ಸಂಬಂಧಿಕರು ಹಾಗೂ ಗ್ರಾಮಸ್ಥರು ರಾಜಶ್ರೀ ಸಿಮೆಂಟ್ ಕಂಪೆನಿ ಎದುರು ಪ್ರತಿಭಟನೆ ನಡೆಸಿ ಪರಿಹಾರಕ್ಕಾಗಿ ಆಗ್ರಹಿಸಿದರು. ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಕುಟುಂಬದ ಸದಸ್ಯರೊಬ್ಬರಿಗೆ ಕಾಯಂ ನೌಕರಿ ನೀಡುವಂತೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರತಿಭಟನೆ ನಡೆಸಿದರು.

ಕಂಪನಿ ಅಧಿಕಾರಿಗಳು ಮೃತ ಕುಟುಂಬಕ್ಕೆ ₹ 33 ಲಕ್ಷ ಪರಿಹಾರ ಮತ್ತು ಕಾಯಂ ನೌಕರಿ ಕೊಡುವುದಾಗಿ ಭರವಸೆ ನೀಡಿದ್ದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಕಂಪನಿ ಅಧ್ಯಕ್ಷ ಉದಯ ಪವಾರ್, ಉಪಾಧ್ಯಕ್ಷ ಅಶೋಕ ನೆನಿನ್, ಮೃತನ ತಂದೆ ಮಲ್ಲಿಕಾರ್ಜುನ ಬೊಮ್ನಳ್ಳಿ, ಮುಖಂಡರಾದ ಮರೆಪ್ಪ ತಾತಾ, ರಾಜಶೇಖರ ಪುರಾಣಿಕ, ಲಚ್ಚಪ್ಪ ಜಮಾದಾರ, ದಿನೇಶ ಸಣ್ಣೂರ, ಶ್ರೀನಾಥ ಪಿಲ್ಲಿ, ಜಮೀಲ್ ಆಲಂಪುರಿ, ರುದ್ರು ಪಿಲ್ಲಿ, ಶರಣು ಸಜ್ಜನ, ದೇವಾನಂದ ಪಿಲ್ಲಿ, ನಾಗೇಂದ್ರ ಲಿಂಗಂಪಲ್ಲಿ, ಭೀಮಾಶಂಕರ ಕೋಳಕೂರ, ಲಿಂಗರಾಜ ತಳಕಿನ, ಮಲ್ಲಿಕಾರ್ಜುನ ಸೇರಿ ಅನೇಕರಿದ್ದರು.

ಡಿವೈಎಸ್‌ಪಿ ಎಸ್.ಎಸ್. ಹಿರೇಮಠ, ಸಿಪಿಐಗಳಾದ ಮಹಾದೇವಪ್ಪ ದಿಡ್ಡಿಮನಿ, ಜಗದೇವಪ್ಪ ಪಾಳಾ, ದೌಲತ್ ಕುರಿ, ಪಿಎಸ್‌ಐ ಸಂಗಮೇಶ ಅಂಗಡಿ, ಗೌತಮ್ ಗುತ್ತೇದಾರ ಮತ್ತು ಪೊಲೀಸ್ ಸಿಬ್ಬಂದಿ ಹಾಜರಿದ್ದರು.

ಅಂಬರೀಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.