ಶಹಾಬಾದ್: ‘ಈಚೆಗೆ ನಡೆದ ಸಭೆಯಲ್ಲಿ ಭಾರತೀಯ ಜನತಾ ಪಾರ್ಟಿ ಶಹಾಬಾದ್ ಮಂಡಲಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ’ ಎಂದು ಅಧ್ಯಕ್ಷ ನಿಂಗಣ್ಣ ಹುಳುಗೋಳ್ಕರ ತಿಳಿಸಿದ್ದಾರೆ.
ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ‘ಅಧ್ಯಕ್ಷರಾಗಿ ನಿಂಗಣ್ಣ ಶಿವಶರಣಪ್ಪ ಹುಳುಗೋಳ್ಕರ, ಉಪಾಧ್ಯಕ್ಷರಾಗಿ ಸಿದ್ರಾಮ ಬಲಭೀಮ ಕುಸಾಳೆ, ಸದಾನಂದ ಈರಣ್ಣ ಕುಂಬಾರ, ಶರಣಪ್ಪ ಬಸಣ್ಣ ಭೋಗಶೆಟ್ಟಿ, ರವಿ ಪಾಂಡು ರಾಠೋಡ, ಮಹಾದೇವ ಕಾಶಪ್ಪ ಗೊಬ್ಬುರಕರ, ಶಶಿಕಲಾ ಶರಣಪ್ಪ ಸಜ್ಜನ, ಪ್ರಧಾನ ಕಾರ್ಯದರ್ಶಿಗಳಾಗಿ ದಿನೇಶ ಸತ್ತೊಬಾ ಗೌಳಿ, ದೇವದಾಸ ಜಾಧವ, ಕಾರ್ಯದರ್ಶಿಗಳಾಗಿ ನಾರಾಯಣ ಕಂದಕೂರ, ರಾಜು ವಿಠಲ ಕುಂಬಾರ, ರಾಜೇಂದ್ರಕುಮಾರ ದೋಂಡಿಬಾ ಮಾನೆ, ಲತಾ ಸಂಜೀವಕುಮಾರ, ಜಯಶ್ರೀ ಸಂಜೀವ ಸೂಡಿ, ನಂದಾ ಬಸವರಾಜ ಗುಡೂರ, ಖಜಾಂಚಿಯಾಗಿ ಕಾಶಣ್ಣಾ ವೀರಣ್ಣ ಚನ್ನೂರ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಬಿರಾದಾರ, ಸದಾನಂದ ಕುಂಬಾರ, ಸಿದ್ರಾಮ ಬಲಭೀಮ ಕುಸಾಳೆ, ದಿನೇಶ್ ಗೌಳಿ, ದೇವದಾಸ್ ಜಾಧವ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.