ಹಳೆ ಶಹಾಬಾದ್ ವಿಶ್ವರಾಧ್ಯ ಮಠ ಸಂಪೂರ್ಣ ಜಲವೃತ್ತದಲ್ಲಿ ಸಿಲುಕಿದ ವ್ಯಕ್ತಿಯನ್ನು ಅಗ್ನಿಶಾಮಕ ದಳ ರಕ್ಷಿಸಿದರು.
ಶಹಾಬಾದ್: ಮಹಾರಾಷ್ಟ್ರದ ಜಲಾಶಯಗಳಿಂದ ನಿರಂತರ ನೀರು ಹರಿಬಿಡುತ್ತಿರುವ ಪರಿಣಾಮದಿಂದ ನಗರದ ಹಳೆ ಶಹಬಾದ್, ಸಂಗ್ ಏರಿಯಾ ಅಪ್ಪರ ಮಡ್ಡಿ ಲೋವರ್ ಮಡ್ಡಿ ಸುಮಾರು ನಾಲ್ಕು ವಾರ್ಡಗಳಲ್ಲಿ ಹಳ್ಳದ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಹಳೆ ಶಹಾಬಾದ್ ವಿಶ್ವರಾಧ್ಯ ಮಠ ಸಂಪೂರ್ಣ ಜಲ ದಿಗ್ಬಂಧನವಾಗಿದೆ. ಆಕಸ್ಮಿಕವಾಗಿ ಮಠದಲ್ಲಿ ಉಳಿದುಕೊಂಡ ಮಾನಸಿಕ ಅಸ್ತವ್ಯಸ್ತ ಮಹೆಬೂಬ್ ಪಟೇಲ್ ಅವರನ್ನು ರಕ್ಷಿಸಿ ಅಗ್ನಿಶಾಮಕ ದಳ ತಂಡ ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ.
ವಾರ್ಡ್ ನಂಬರ್ 7, 8, 9 , ಮತ್ತು 26, 27ರಲ್ಲಿ ಹೆಚ್ಚು ನೀರು ನುಗ್ಗಿದ ಪರಿಣಾಮ ಜನರು ಸಂಪರ್ಕ ಕುಂಠಿತವಾಗಿದೆ. ಜೆಪಿ ಕಂಪನಿ ಮಾರ್ಗದ ಮೇಲು ಸೇತುವೆ ಅಥವಾ ರೈಲು ಮೇಲು ಸೇತುವೆ ಮಾರ್ಗದಿಂದ ಜನರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಅವಲಂಬಿತರಾಗಿರುವುದು ಕಂಡುಬಂತು.
ಹಳ್ಳದ ಹೂಳು ತೆಗಯದೆ ಹಾಗೂ ಹಳೆಯ ಸೇತುವೆ ತೆರವುಗೊಳಿಸದ ಕಾರಣ ನೀರಿನ ಒತ್ತಡ ಹೆಚ್ಚಾಗಿ ಮನೆಗಳಿಗೆ ನೀರು ನುಗ್ಗುತ್ತಿದೆ. ಅಧಿಕಾರಿಗಳು ಬಂದು ವೀಕ್ಷಣೆ ಮಾಡುತ್ತಾರೆ ಆದರೆ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲತಿಮ್ಮಣ್ಣ ಕೂರಡೆಕರ್ ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.