ಶಹಾಪುರ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಹೊತಪೇಟ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕೊಳೆತ ಮೊಟ್ಟೆ ವಿತರಿಸಲಾಗುತ್ತಿದೆ ಎಂದು ಆರೋಪಿಸಿ ಶಾಲಾ ಮಕ್ಕಳು, ಶುಕ್ರವಾರ ತರಗತಿಯಿಂದ ಹೊರಗುಳಿದು
ಪ್ರತಿಭಟಿಸಿದರು.
‘ಕಳಪೆ ಮೊಟ್ಟೆ ವಿತರಣೆ ಪ್ರಶ್ನಿಸಿ ದರೆ ಮುಖ್ಯ ಶಿಕ್ಷಕರು, ಶಿಕ್ಷಕರು ಬೆದರಿಸುತ್ತಾರೆ. ಕಡಿಮೆ ಪ್ರಮಾಣದಲ್ಲಿ ತರಕಾರಿ ಪೂರೈಸುತ್ತಿದ್ದು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ಹಾಳಾಗಿದೆ. ಮಳೆ ಬಂದರೆ ಕೊಠಡಿಗಳ ಚಾವಣಿ ಸೋರುತ್ತವೆ’ ಎಂದು
ವಿದ್ಯಾರ್ಥಿಯೊಬ್ಬರು ದೂರಿದರು.
‘ಶಾಲೆಯ ಅಭಿವೃದ್ಧಿಗಾಗಿ ನಿಧಿ ಪೆಟ್ಟಿಗೆ ಇರಿಸಿದ್ದು, ದೇಣಿಗೆ ರೂಪದಲ್ಲಿ ಹಣ ಹಾಕುವಂತೆ ಮುಖ್ಯ ಶಿಕ್ಷಕರು ಬಲವಂತ ಮಾಡುತ್ತಿದ್ದಾರೆ’ ಎಂದು ಮತ್ತೊಬ್ಬ ವಿದ್ಯಾರ್ಥಿ ದೂರಿದರು.
‘ಶಾಲೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದೇನೆ. ಮೊಟ್ಟೆಯನ್ನು ಸರಿಯಾಗಿ ಬೇಯಿಸಿ ಕೊಡಲು ಸೂಚಿಸಲಾಗಿದೆ. ವಿದ್ಯಾರ್ಥಿ ಗಳಿಂದ ಪರೀಕ್ಷೆ ಶುಲ್ಕ ಪಡೆದಿದ್ದು, ಪಾಲಕರ ಒಪ್ಪಿಗೆ ಮೇರೆಗೆ ಗುಂಪು ಸಮವಸ್ತ್ರ ಖರೀದಿಸಲಾಗಿದೆ’ ಎಂದು ಸಮೂಹ ಸಂಪನ್ಮೂಲ ಅಧಿಕಾರಿ (ಪ್ರಭಾರ) ವೀರಭದ್ರಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.