ADVERTISEMENT

ಕಲಬುರಗಿ: ಶರಣಪ್ಪ ಉದ್ಬಾಳ್ ಎಐಡಿವೈಒ ನೂತನ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 3:11 IST
Last Updated 29 ನವೆಂಬರ್ 2021, 3:11 IST
ಶರಣಪ್ಪ ಉದ್ಬಾಳ್
ಶರಣಪ್ಪ ಉದ್ಬಾಳ್   

ಕಲಬುರಗಿ: ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆಯ (ಎಐಡಿವೈಒ) ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಶರಣಪ್ಪ ಉದ್ಬಾಳ್ ಮತ್ತು ಕಾರ್ಯದರ್ಶಿಯಾಗಿ ಸಿದ್ದಲಿಂಗ ಬಾಗೇವಾಡಿ ಆಯ್ಕೆಯಾಗಿದ್ದಾರೆ.

ನಗರದಲ್ಲಿ ಭಾನುವಾರ ಮುಕ್ತಾಯವಾದ ಸಂಘಟನೆಯ 5ನೇ ರಾಜ್ಯಮಟ್ಟದ ಸಮ್ಮೇಳನದಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಚನ್ನಬಸವ ಜಾನೇಕಲ್ (ರಾಯಚೂರು), ವಿಜಯಕುಮಾರ್‌ ಹೊಸದುರ್ಗ (ಚಿತ್ರದುರ್ಗ), ಕೃಷ್ಣ (ಬೆಂಗಳೂರು), ಜಗನ್ನಾಥ್ ಎಚ್‌.ಎಸ್‌. (ಕಲಬುರಗಿ) ಹಾಗೂ ವಿನಯ್ ಸಾರಥಿ (ಬೆಂಗಳೂರು) ಅವರನ್ನು ಆಯ್ಕೆ ಮಾಡಲಾಯಿತು. ಕಚೇರಿ ಕಾರ್ಯದರ್ಶಿ ಹಾಗೂ ಖಜಾಂಚಿಯಾಗಿ ಜಯಣ್ಣ (ಬೆಂಗಳೂರು), ಸೆಕ್ರೆಟೆರಿಯೆಟ್‌ ಸದಸ್ಯರಾಗಿ ಭವಾನಿಶಂಕರ ಗೌಡ (ಧಾರವಾಡ), ಶ್ರೀಕಾಂತ ಕೊಂಡಗೂಳಿ (ವಿಜಯಪುರ), ಶರಣು ಗಡ್ಡಿ (ಕೊಪ್ಪಳ), ಸುನಿಲ್, ಜಗದೀಶ ವಿ.ಎನ್‌. (ಬಳ್ಳಾರಿ) ಹಾಗೂ ಅಂಬಿಕಾ (ಕಲಬುರಗಿ) ಆಯ್ಕೆಯಾಗಿದ್ದಾರೆ.

ADVERTISEMENT

29 ಮಂದಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರನ್ನು ಹಾಗೂ 20 ಮಂದಿ ಕೌನ್ಸಿಲ್‌ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಸಂಘಟನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ, ಪ್ರಧಾನ ಕಾರ್ಯದರ್ಶಿ ಪ್ರತಿಭಾ ನಾಯಕ್, ನಿಕಟಪೂರ್ವ ರಾಜ್ಯ ಘಟಕದ ಅಧ್ಯಕ್ಷೆ ಎಂ. ಉಮಾದೇವಿ ಮತ್ತು ಕಾರ್ಯದರ್ಶಿ ಜಿ. ಶಶಿಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.