ADVERTISEMENT

ಅವಳಿ ಬಾಲ ಮುನಿಗಳಿಂದ ಶತಾವಧಾನ ಇಂದು

ಸುರಪುರದ ಆರಾಧನಾ ಮಂದಿರದಲ್ಲಿ ಕಾರ್ಯಕ್ರಮ

ಅಶೋಕ ಸಾಲವಾಡಗಿ
Published 10 ಜನವರಿ 2020, 10:13 IST
Last Updated 10 ಜನವರಿ 2020, 10:13 IST
ನಮಿಚಂದ್ರ ಸಾಗರಜಿ ಮತ್ತು ನೇಮಿಚಂದ್ರ ಸಾಗರಜಿ
ನಮಿಚಂದ್ರ ಸಾಗರಜಿ ಮತ್ತು ನೇಮಿಚಂದ್ರ ಸಾಗರಜಿ   

ಸುರಪುರ: ಜೈನ ಧರ್ಮದ 10 ಸಾವಿರಕ್ಕೂ ಹೆಚ್ಚು ಶ್ಲೋಕಗಳನ್ನು10 ವರ್ಷ ವಯಸ್ಸಿನ ಧ್ರುವ ಮತ್ತು ಧೈರ್ಯ ಎಂಬ ಅವಳಿ ಜೈನ ಮುನಿಗಳು ಜ.10 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆವರೆಗೆ ಇಲ್ಲಿನ ಆರಾಧನಾ ಭವನದಲ್ಲಿ ಶತಾವಧಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಇವರು ಸಂಸ್ಕೃತ, ಪ್ರಾಕೃತ, ಹಿಂದಿ, ಗುಜರಾತಿ, ಮರಾಠಿ, ಮಾರ್ವಾಡಿ, ಇಂಗ್ಲಿಷ್, ಪಂಜಾಬಿ, ಕನ್ನಡ, ಉರ್ದು ಸೇರಿದಂತೆ 10 ಭಾಷೆಗಳಲ್ಲಿ ನಿರ್ಗಗಳವಾಗಿ ಪ್ರವಚನ ನೀಡುತ್ತಾರೆ. 28 ರಾಜ್ಯದ 22 ಭಾಷೆ ಬಲ್ಲವರಾಗಿದ್ದಾರೆ. ಭಗವದ್ಗೀತೆ, ಕುರಾನ್, ಬೈಬಲ್, ಗುರು ಗ್ರಂಥಗಳನ್ನು ಸಂಪೂರ್ಣ ಕಂಠಪಾಠ ಮಾಡಿದ್ದಾರೆ.

ಪರಿಚಯ: ಈ ಮುನಿಗಳ ಜನ್ಮ ಸ್ಥಳ ಗುಜರಾತ್‍ನ ಸೂರತ್. ತಂದೆ ಪಿಯೂಷ್‍ ಭಾಯ್‌, ತಾಯಿ ಸೊಸೆಲ್‍ ಬೆನ್. ಮಕ್ಕಳು ಎಲ್ಲರಂತೆ ಟಿವಿ, ಮೊಬೈಲ್‍ಗೆ ಮಾರು ಹೋಗಲಿಲ್ಲ. ಅಧ್ಯಾತ್ಮದ ಶಕ್ತಿ ಅವರನ್ನು ಆಕರ್ಷಿಸಿಸಿತ್ತು.

ADVERTISEMENT

ಗುಜರಾತಿ ಮಾಧ್ಯಮದಲ್ಲಿ 1 ನೇ ತರಗತಿ ಅಭ್ಯಸಿಸಿ ನಂತರ 1 ವರ್ಷ ಗುರುಕುಲದಲ್ಲಿ ಸನ್ಯಾಸ ಜೀವನದ ತರಬೇತಿ ಪಡೆದರು. ಅಭಿನಂದನಚಂದ್ರ ಸಾಗರಜಿ ಅವರಲ್ಲಿ ಸನ್ಯಾಸ ದೀಕ್ಷೆ ಪಡೆದರು.

ಎರಡು ವರ್ಷದ ಅಧ್ಯಾತ್ಮಿಕ ಜೀವನದಲ್ಲಿ 7 ಸಾವಿರ ಕಿ.ಮೀ ಪಾದಯಾತ್ರೆ ಕೈಗೊಂಡು ಜೈನ ಧರ್ಮ ಪ್ರಸಾರ ಕಾರ್ಯ ಕೈಗೊಂಡಿದ್ದಾರೆ. ದೇಶದ 28 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ.

ಎಲ್ಲ ವಿಯಷಗಳಲ್ಲಿ ಪರಿಣಿತಿ

ದೇಶದ ಹೆಸರು, ರಾಜಧಾನಿ, ಅಲ್ಲಿನ ಮಾತೃಭಾಷೆ, ಇತರ ವಿಷಯ, ಗಣಿತದ ಸೂತ್ರ, ಒಗಟು ಸೇರಿದಂತೆ ಪ್ರೇಕ್ಷಕರು ಕೇಳುವ ಯಾವುದೇ ಪ್ರಶ್ನೆಗಳಿಗೆ ತಟ್ಟನೆ ಉತ್ತರ ನೀಡುತ್ತಾರೆ. ಕಣ್ಣಿಗೆ ಪಟ್ಟಿಕೊಂಡು ಪಿರಾಮಿಡ್ ಕ್ಯೂಬ್ ಸರಿಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.