ADVERTISEMENT

ಶಿವಸೇನೆ ರಾಜ್ಯ ಅಧ್ಯಕ್ಷರಾಗಿ ಸಿದ್ಧಲಿಂಗ ಸ್ವಾಮೀಜಿ ನೇಮಕ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 18:01 IST
Last Updated 26 ಆಗಸ್ಟ್ 2025, 18:01 IST
ಮುಂಬೈನಲ್ಲಿ ಸಿದ್ಧಲಿಂಗ ಸ್ವಾಮೀಜಿಗೆ ಡಿಸಿಎಂ ಏಕನಾಥ ಶಿಂಧೆ ನೇಮಕ ಪತ್ರ ನೀಡಿದರು
ಮುಂಬೈನಲ್ಲಿ ಸಿದ್ಧಲಿಂಗ ಸ್ವಾಮೀಜಿಗೆ ಡಿಸಿಎಂ ಏಕನಾಥ ಶಿಂಧೆ ನೇಮಕ ಪತ್ರ ನೀಡಿದರು   

ಜೇವರ್ಗಿ (ಕಲಬುರಗಿ ಜಿಲ್ಲೆ): ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಸಾರಥ್ಯದ ಶಿವಸೇನೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ, ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿದೆ.

ಮುಂಬೈ ನಗರದ ಮಹಾರಾಷ್ಟ್ರ ಮಂತ್ರಾಲಯದಲ್ಲಿ ಮಂಗಳವಾರ ಏಕನಾಥ ಶಿಂದೆ ಅವರು ಸಿದ್ಧಲಿಂಗ ಸ್ವಾಮೀಜಿ ಅವರಿಗೆ ನೇಮಕಾತಿ ಪತ್ರ ನೀಡಿದರು.

ಶ್ರೀರಾಮ ಸೇನೆ ಸಂಘಟನೆ ಪ್ರಮುಖರಾದ ಗಂಗಾಧರ್ ಕುಲಕರ್ಣಿ, ಆನಂದ್ ಶೆಟ್ಟಿ ಅಡ್ಡೇರ, ಮಹಾಲಿಂಗಪ್ಪ ಬಾಗಲಕೋಟೆ, ಅಮರ ಬೆಂಗಳೂರು, ಭಾಸ್ಕರ್ ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾದರು.

ADVERTISEMENT

‘ಶೀಘ್ರದಲ್ಲೇ ಕಲಬುರಗಿ ನಗರದಲ್ಲಿ ಅಧಿಕಾರ ಸ್ವೀಕಾರ ಹಾಗೂ ಸಮಾವೇಶ ಆಯೋಜಿಸಲಾಗುವುದು’ ಎಂದು ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ಸಿದ್ಧಲಿಂಗ ಸ್ವಾಮೀಜಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.