ADVERTISEMENT

ಕಾಳಗಿ: ‘ಬಾಲ್ಯವಿವಾಹ ನಿಷೇಧ ಸಾಮಾಜಿಕ ಅರಿವು ಕಾರ್ಯಕ್ರಮ’

​ಪ್ರಜಾವಾಣಿ ವಾರ್ತೆ
Published 7 ಮೇ 2025, 14:11 IST
Last Updated 7 ಮೇ 2025, 14:11 IST
ಕಾಳಗಿ ತಾಲ್ಲೂಕಿನ ಬುಗಡಿ ತಾಂಡಾದಲ್ಲಿ ಮಂಗಳವಾರ ಬಾಲ್ಯ ವಿವಾಹ ನಿಷೇಧ ಕುರಿತು ಸಾಮಾಜಿಕ ಅರಿವು ಮೂಡಿಸಲಾಯಿತು
ಕಾಳಗಿ ತಾಲ್ಲೂಕಿನ ಬುಗಡಿ ತಾಂಡಾದಲ್ಲಿ ಮಂಗಳವಾರ ಬಾಲ್ಯ ವಿವಾಹ ನಿಷೇಧ ಕುರಿತು ಸಾಮಾಜಿಕ ಅರಿವು ಮೂಡಿಸಲಾಯಿತು   

ಕಾಳಗಿ: ತಾಲ್ಲೂಕಿನ ಬುಗಡಿ ತಾಂಡಾದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಅಶೋಕ ಲೇಲ್ಯಾಂಡ್ ಫೌಂಡೇಶನ್, ಲರ್ನಿಂಗ್ ಲಿಂಕ್ ಫೌಂಡೇಶನ್ ಹಾಗೂ ಅರಣಕಲ್ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಬುಧವಾರ ರೋಡ್ ಟು ಸ್ಕೂಲ್ ಕಾರ್ಯಕ್ರಮ ಜರುಗಿತು.

ಅದರಡಿಯಲ್ಲಿ ‘ಬಾಲ್ಯವಿವಾಹ ನಿಷೇಧ ಸಾಮಾಜಿಕ ಅರಿವು’ ಉದ್ದೇಶಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುನೀತಾ ಮಾತನಾಡಿದರು.

ಎಲ್.ಎಲ್.ಎಫ್ ಸಂಸ್ಥೆಯ ಗಂಗಾಧರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮಣಿ, ಎಸ್ಡಿಎಂಸಿ ಅಧ್ಯಕ್ಷ ಹೇಮಂತ ಉಪಸ್ಥಿತರಿದ್ದರು. ಎಲ್.ಎಲ್.ಎಫ್ ಸಂಸ್ಥೆಯ ಸದಸ್ಯ ಪ್ರಮೋದ, ರೇಖಾ, ನಟರಾಜ್ ಸೇರಿದಂತೆ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರು ಇದ್ದರು.

ADVERTISEMENT

ಅದೇ ರೀತಿಯಾಗಿ ಅರಜಂಬಗಾ ಗ್ರಾಮದಲ್ಲಿಯೂ ಅರಿವು ಮೂಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.