ADVERTISEMENT

ಕಮಲಾಪುರ: ಮಹಾಗಾಂವ ಅನಾಥಾಶ್ರಮದಲ್ಲಿ ಸಾಮಾಜಿಕ ಆರ್ಥಿಕ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 4:46 IST
Last Updated 20 ಅಕ್ಟೋಬರ್ 2025, 4:46 IST
ಕಮಲಾಪುರ ತಾಲ್ಲೂಕಿನ ಮಹಾಗಾಂವ ಚಿಗುರು ಅನಾಥಾಶ್ರಮದಲ್ಲಿ ಆರ್ಥಿಕ ಸಾಮಾಜಿಕ ಸಮೀಕ್ಷೆ ನಡೆಸಿ ತಹಶೀಲ್ದಾರ ಮೋಸಿನ ಅಹಮ್ಮದ ಮಕ್ಕಳಿಗೆ ಸಿಹಿ ತಿನಿಸು ವಿತರಿಸಿದರು
ಕಮಲಾಪುರ ತಾಲ್ಲೂಕಿನ ಮಹಾಗಾಂವ ಚಿಗುರು ಅನಾಥಾಶ್ರಮದಲ್ಲಿ ಆರ್ಥಿಕ ಸಾಮಾಜಿಕ ಸಮೀಕ್ಷೆ ನಡೆಸಿ ತಹಶೀಲ್ದಾರ ಮೋಸಿನ ಅಹಮ್ಮದ ಮಕ್ಕಳಿಗೆ ಸಿಹಿ ತಿನಿಸು ವಿತರಿಸಿದರು   

ಕಮಲಾಪುರ: ತಾಲ್ಲೂಕಿನ ಮಹಾಗಾಂವ ಬಳಿಯ ಚಿಗುರು ಅನಾಥಾಶ್ರಮದಲ್ಲಿ ಭಾನುವಾರ ಸಾಮಾಜಿಕ ಆರ್ಥಿಕ ಸಮೀಕ್ಷೆ ಕೈಗೊಳ್ಳಲಾಯಿತು.

ತಹಶೀಲ್ದಾರ್‌ ಮೊಹಮ್ಮದ ಮೋಸಿನ ಅಹಮ್ಮದ್‌ ಅವರ ನೇತೃತ್ವದ ಸಿಆರ್‌ಸಿ ರಾಗಿಣಿ, ಶಿಕ್ಷಕ ಅಂಬಾರಾಯ ಮಡ್ಡೆ ಸಮೀಕ್ಷೆ ನಡೆಸಿದರು.

ಈ ಅನಾಥಾಶ್ರಮದಲ್ಲಿನ ಮಕ್ಕಳು ವೃದ್ಧರು ಯಾವ ಲೆಕ್ಕಕ್ಕೂ ಸಿಕ್ಕಿರಲಿಲ್ಲ. ಹೀಗಾಗಿ ಇವರ ಆರ್ಥಿಕ ಸಾಮಾಜಿಕ ಸರ್ವೆ ಆಗಿರಲಿಲ್ಲ. ಮಕ್ಕಳು ವೃದ್ಧರು ಸೇರಿ ಸುಮಾರು 32 ಜನರಿದ್ದು, ಮಕ್ಕಳಲ್ಲಿ ಒಬ್ಬರನ್ನು ವೃದ್ಧರಲ್ಲಿ ಒಬ್ಬರನ್ನು ಕುಟುಂಬದ ಮುಖ್ಯಸ್ಥರನ್ನಾಗಿ ಮಾಡಿ ಸಮೀಕ್ಷೆ ಮಾಡಲಾಯಿತು.

ADVERTISEMENT

ದೀಪಾವಳಿ ಹಬ್ಬದ ನಿಮಿತ್ತ ತಹಶೀಲ್ದಾರ್‌ ಮೋಸಿನ ಅಹಮ್ಮದ್‌ ಮಕ್ಕಳಿಗೆ ಸಿಹಿ ತಿನಿಸು ಹಂಚಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.