ADVERTISEMENT

ಹೊರಗೆ ಥಳುಕು ಒಳಗೆ ಹುಳುಕು: ಇದು ಚಿಂಚೋಳಿಯ ಪ್ರಜಾಸೌಧದ ವ್ಯಥೆ

ಜಗನ್ನಾಥ ಡಿ.ಶೇರಿಕಾರ
Published 10 ಜುಲೈ 2025, 6:36 IST
Last Updated 10 ಜುಲೈ 2025, 6:36 IST
ಚಿಂಚೋಳಿಯ ನೂತನ ಪ್ರಜಾಸೌಧದಲ್ಲಿ ಕಟ್ಟಡ ಕೂಡು ರಸ್ತೆ ನಿರ್ಮಾಣ ನಡೆಯುತ್ತಿದೆ
ಚಿಂಚೋಳಿಯ ನೂತನ ಪ್ರಜಾಸೌಧದಲ್ಲಿ ಕಟ್ಟಡ ಕೂಡು ರಸ್ತೆ ನಿರ್ಮಾಣ ನಡೆಯುತ್ತಿದೆ   

ಚಿಂಚೋಳಿ: ಹೊರಗೆ ಥಳುಕು ಒಳಗೆ ಹುಳುಕು; ಇದು ಚಿಂಚೋಳಿಯ ಪ್ರಜಾಸೌಧದ ವ್ಯಥೆ.

ಪುರಸಭೆ ವ್ಯಾಪ್ತಿಯ ಚಿಂಚೋಳಿ ಚಂದಾಪುರ ಅವಳಿ ಪಟ್ಟಣಗಳ ಮಧ್ಯೆ ಚಿಂಚೋಳಿ ತಾಂಡೂರು ರಸ್ತೆ ಬದಿಯಲ್ಲಿ ನಿರ್ಮಿಸಿದ ಸುಸಜ್ಜಿತ ಕಟ್ಟಡಕ್ಕೆ ಕಂದಾಯ ಇಲಾಖೆ ಕಾರ್ಯನಿರ್ವಹಿಸುತ್ತಿದೆ.

ಕಳೆದ ಒಂದು ತಿಂಗಳಿನಿಂದ ಹಳೆಯ ಮಿನಿ ವಿಧಾನಸೌಧದಿಂದ ಹೊಸ ಪ್ರಜಾಸೌಧ (ಆಡಳಿತ ಸೌಧ)ಕ್ಕೆ ಸ್ಥಳಾಂತರಗೊಂಡಿದೆ. ಹಂತ ಹಂತವಾಗಿ ಸ್ಥಳಾಂತರ ಕಾರ್ಯನಡೆದಿದ್ದು ಜು.7ಕ್ಕೆ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಗೊಂಡಿದ್ದು ಹಳೆಯ ಕಟ್ಟಡದಿಂದ ಮುಕ್ತಿ ಪಡೆಯಲಾಗಿದೆ.

ADVERTISEMENT

ಆದರೆ ಹೊಸ ಕಟ್ಟಡದಲ್ಲಿ ಕಚೇರಿಯ ಸಿಬ್ಬಂದಿಗೆ, ಜನರಿಗೆ ಕುಳಿತುಕೊಳ್ಳಲು ಆಸನಗಳು ಇಲ್ಲದ ಸ್ಥಿತಿಯಿದೆ. ನೂತನ ಪ್ರಜಾಸೌಧದಲ್ಲಿ ಫರ್ನಿಚರ್ ಮಾಡಿಸಿಕೊಡಲು ಇಲ್ಲಿನ ದಿ ಕಲಬುರಗಿ ಸಿಮೆಂಟ್ ಕಂಪನಿ ಮತ್ತು ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ಕೈಗಾರಿಕೆಗಳ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿಯಲ್ಲಿ ಪ್ರಯತ್ನಗಳು ಕಳೆದ 6 ತಿಂಗಳಿನಿಂದ ಸಾಗಿವೆ ಆದರೆ ಈವರೆಗೂ ಫಲ ಸಿಕ್ಕಿಲ್ಲ.

ಇಬ್ಬರು ತಹಶೀಲ್ದಾರ್‌ಗಳ ಚೇಂಬರ್, ಕೋರ್ಟ ಹಾಲ್, ಸಭಾಂಗಣ, ಕ್ಯಾಬಿನ್, ಆಡಳಿತ ಶಾಖೆಗಳು, ಶಿರಸ್ತೇದಾರ್ ಕ್ಯಾಬಿನ್, ನೋಟಿಸ್ ಬೋರ್ಡ್‌, ನೂತನ ಟೇಬಲ್, ಖುರ್ಚಿಗಳ ಕೊರತೆಯಲ್ಲಿಯೇ ಕಚೇರಿ ನಡೆಸಿಕೊಂಡು ಹೋಗುವಂತಾಗಿದೆ.

ಚಿಂಚೋಳಿಯನೂತನ ಪ್ರಜಾಸೌಧ ಕಟ್ಟಡದಲ್ಲಿರುವ ಆಡಳಿತ ಶಾಖೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಮಧ್ಯೆಯೂ ಕೆಲಸ ಮಾಡುತ್ತಿರುವ ಸಿಬ್ಬಂದಿ

ಕಚೇರಿಗೆ ಸ್ಥಳಾಂತರಕ್ಕೆ ಮೊದಲೇ ಮೂಲ ಸೌಕರ್ಯ ಒದಗಿಸಿದ್ದರೆ ನೂತನ ಕಚೇರಿಗೆ ಒಂದು ಕಳೆ ಬರುತ್ತಿತ್ತು. ಆದರೆ ಸುಸಜ್ಜಿತ ಕಟ್ಟಡಗಳು ಕೊರತೆಗಳ ಮಧ್ಯೆ ಕಾರ್ಯನಿರ್ವಹಿಸುವಂತಾಗಿದೆ.

ಇದರ ಜತೆಗೆ ಇಲ್ಲಿನ ಪುರಸಭೆ ಕಚೇರಿ ನೂತನ ಕಟ್ಟಡ ನಿರ್ಮಿಸಲಾಗಿದ್ದು ಫರ್ನಿಚರ್ ಇಲ್ಲ. ಜನ ಆಸ್ತಿ ತೆರಿಗೆ ಭರಿಸಿದ್ದಾರೆ. ಈಗ ಬಿ.ಖಾತಾ ಅಭಿಯಾನದಲ್ಲೂ ಸಾಕಷ್ಟು ಅನುದಾನ ಹರಿದು ಬಂದಿದೆ. ಹೀಗಿದ್ದರೂ ಈ ಕಚೇರಿಯೂ ಹೊರಗೆ ಥಳುಕು ಒಳಗೆ ಹುಳುಕು ಎಂಬಂತೆ ಕಾರ್ಯನಿರ್ವಹಿಸುತ್ತಿದೆ.

ಸುಬ್ಬಣ್ಣ ಜಮಖಂಡಿ ತಹಶೀಲ್ದಾರರು ಚಿಂಚೋಳಿ
ನೂತನ ಪ್ರಜಾಸೌಧಕ್ಕೆ ಪೂರ್ಣಪ್ರಮಾಣದಲ್ಲಿ ಕಚೇರಿ ಸ್ಥಳಾಂತರವಾಗಿದೆ. ಮೂಲ ಸೌಕರ್ಯಗಳಿಗೆ ಪ್ರಯತ್ನ ನಡೆಯುತ್ತಿದೆ. ಶೀಘ್ರವೇ ಸೌಲಭ್ಯ ಕಲ್ಪಿಸುವ ವಿಶ್ವಾಸವಿದೆ
ಸುಬ್ಬಣ್ಣ ಜಮಖಂಡಿ ತಹಶೀಲ್ದಾರ್ ಚಿಂಚೋಳಿ
ನಿಂಗಮ್ಮ ಬಿರಾದಾರ ಮುಖ್ಯಾಧಿಕಾರಿ ಪುರಸಭೆ ಚಿಂಚೋಳಿ
ಪುರಸಭೆಯ ನೂತನ ಕಚೇರಿಯಲ್ಲಿ ಫರ್ನಿಚರ್ ಇಲ್ಲದಿರುವುದು ನನ್ನ ಗಮನಕ್ಕೆ ಬಂದಿದೆ. ಅಧ್ಯಕ್ಷರು ಚುನಾಯಿತ ಸದಸ್ಯರ ಜತೆ ಚರ್ಚಿಸಿ ಮೇಲಧಿಕಾರಿಗಳ ಅನುಮತಿ ಪಡೆದು ಫರ್ನಿಚರ್ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುವೆ
ನಿಂಗಮ್ಮ ಬಿರಾದಾರಮುಖ್ಯಾಧಿಕಾರಿ ಚಿಂಚೋಳಿ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.