ADVERTISEMENT

ಆಯ್ದ ರೂಟ್‌ಗಳಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ಸಂಚಾರ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 4:44 IST
Last Updated 8 ಏಪ್ರಿಲ್ 2021, 4:44 IST
ಮುಷ್ಕರದ ‌ಎರಡನೇ ದಿನವಾದ ಗುರುವಾರ
ಮುಷ್ಕರದ ‌ಎರಡನೇ ದಿನವಾದ ಗುರುವಾರ   

ಕಲಬುರ್ಗಿ: ವೇತನ ಪರಿಷ್ಕರಣೆಗೆ ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರು ‌ನಡೆಸುತ್ತಿರುವ ಮುಷ್ಕರದ ‌ಎರಡನೇ ದಿನವಾದ ಗುರುವಾರ ಇಲ್ಲಿನ ‌ಕೇಂದ್ರ ಬಸ್ ನಿಲ್ದಾಣದಿಂದ ಐದು ಸಾರಿಗೆ ಸಂಸ್ಥೆ ಬಸ್‌ಗಳು ವಿವಿಧೆಡೆ ಸಂಚಾರ ನಡೆಸಿವೆ.

ಆದರೆ, ದೂರದ ಊರಿನ ಪ್ರಯಾಣ ಸಾಧ್ಯವಾಗಿಲ್ಲ. ಕೆಲ‌ ಸಿಬ್ಬಂದಿಯ ‌ಮನವೊಲಿಸಿದ ಅಧಿಕಾರಿಗಳು ಕಲಬುರ್ಗಿಯಿಂದ ಜೇವರ್ಗಿ, ಶಹಾಪುರಗಳಿಗೆ ಬಸ್ ಓಡಿಸಲು ಸಫಲರಾದರು.

ಕೇಂದ್ರ ಬಸ್ ನಿಲ್ದಾಣದಿಂದ ಖಾಸಗಿ ಬಸ್ ಸಂಚಾರ ಮುಂದುವರಿದಿದೆ. ಆದರೆ, ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಕಂಡು ಬಂದಿದೆ‌.

ADVERTISEMENT

ಬಸ್ ನಿಲ್ದಾಣ, ನಗರದಲ್ಲಿರುವ ಮೂರು ಬಸ್ ಡಿಪೊಗಳ ಎದುರು ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ.

ನಗರ ಸಾರಿಗೆ ‌ಸಂಚಾರ ಸಂಪೂರ್ಣ ಸ್ತಬ್ದವಾಗಿದೆ. ಉದ್ಯೋಗಿಗಳು ಸ್ವಂತ ವಾಹನ, ಅಟೊಗಳನ್ನು ನೆಚ್ಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.