ADVERTISEMENT

ಆಳಂದ: ಮಕ್ಕಳ ವಿಜ್ಞಾನ ಹಬ್ಬ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 9:04 IST
Last Updated 13 ಡಿಸೆಂಬರ್ 2019, 9:04 IST
ಆಳಂದ ಪಟ್ಟಣದಲ್ಲಿ ಮಕ್ಕಳ ವಿಜ್ಞಾನ ಹಬ್ಬದ ಅಂಗವಾಗಿ ಬುಧವಾರ ಮೆರವಣಿಗೆ ನಡೆಯಿತು
ಆಳಂದ ಪಟ್ಟಣದಲ್ಲಿ ಮಕ್ಕಳ ವಿಜ್ಞಾನ ಹಬ್ಬದ ಅಂಗವಾಗಿ ಬುಧವಾರ ಮೆರವಣಿಗೆ ನಡೆಯಿತು   

ಆಳಂದ: ಆಳಂದ ಉತ್ತರ ವಲಯ ಶೈಕ್ಷಣಿಕ ಕ್ಲಸ್ಟರ್‌ವತಿಯಿಂದ ಪಟ್ಟಣದ ಸುಲ್ತಾನಪುರಗಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬುಧವಾರ ಇಲ್ಲಿ ಮಕ್ಕಳ ವಿಜ್ಞಾನ ಹಬ್ಬ ನಡೆಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರಪ್ಪ ನೀರಡಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಸಂತಸದಾಯಕ ಕಲಿಕೆ ವಾತಾವರಣ ಅವಶ್ಯ’ ಎಂದರು.

ಸಮನ್ವಯಾಧಿಕಾರಿ ರಾಜಶೇಖರ ಗೋಶಾಳ, ಭಾರತ ಜ್ಞಾನ ವಿಜ್ಞಾನ ಸಮಿತಿ ಸದಸ್ಯ ಪ್ರಭಾಕರ ಸಲಗರೆ, ಶಿಕ್ಷಕ ಶ್ರೀಶೈಲ ಮಾಡ್ಯಾಳೆ ಮಾತನಾಡಿದರು.

ADVERTISEMENT

ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಬಡಿಗೇರ, ಸಿಆರ್‌ಸಿ ಪ್ರಕಾಶ ಸೂರವಸೆ, ಮುಖ್ಯ ಶಿಕ್ಷಕ ವಿಶ್ವನಾಥ ಘೋಡಕೆ, ಮಲ್ಲಿಕಾರ್ಜುನ ಮುನ್ನೋಳ್ಳಿ, ಚಂದ್ರಕಾಂತ ಫುಲಾರೆ, ಗುಂಡಪ್ಪ ಕಾಟೇಕರ, ಕಲ್ಯಾಣರಾವ ತಡಕಲೆ, ವಿಜಯಕುಮಾರ ಜಿಡಗೆ, ರಾಣಪ್ಪ ಸಂಗನ್,ಕಿರಣ ಗುತ್ತೇದಾರ ಇದ್ದರು.

ಶಾಲಾ ಮಕ್ಕಳು ಗುರುಭವನದಿಂದ ಸುಲ್ತಾನಪುರಗಲ್ಲಿ ಶಾಲೆವರೆಗೆ ವಿಜ್ಞಾನದ ಭಿತ್ತಿಪತ್ರ, ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಿ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.