ADVERTISEMENT

ಕಲಬುರ್ಗಿ: ತುಂತುರು ಮಳೆಯಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 5:32 IST
Last Updated 22 ಜುಲೈ 2021, 5:32 IST
ಕಲಬುರ್ಗಿಯಲ್ಲಿ ಗುರುವಾರ ತುಂತುರು ಮಳೆಯಲ್ಲಿ ಕೊಡೆ ಹಿಡಿದು ಕರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿನಿ.
ಕಲಬುರ್ಗಿಯಲ್ಲಿ ಗುರುವಾರ ತುಂತುರು ಮಳೆಯಲ್ಲಿ ಕೊಡೆ ಹಿಡಿದು ಕರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿನಿ.   

ಕಲಬುರ್ಗಿ: ಜಿಲ್ಲೆಯ 209 ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ಎರಡನೇ ದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾದವು.

ನಗರ ಹಾಗೂ ಜಿಲ್ಲೆಯ ಬಹುಪಾಲು ಕಡೆ ತುಂತುರು ಮಳೆ ಸುರಿಯುತ್ತಿದ್ದು, ಪರೀಕ್ಷಾರ್ಥಿಗಳು ಕೊಡೆ, ಜರ್ಕಿನ್ ಸಹಾಯದೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದರು.

ಬೆಳಿಗ್ಗೆ 10ರ ಹೊತ್ತಿಗೆ ಎಲ್ಲ ವಿದ್ಯಾರ್ಥಿಗಳನ್ನೂ ಕೊಠಡಿಯೊಳಗೆ ಬಿಡಲಾಗಿದ್ದು, 10.30ಕ್ಕೆ ಪರೀಕ್ಷೆ ಆರಂಭವಾದವು.

ADVERTISEMENT

ಪರೀಕ್ಷಾ ಕೇಂದ್ರದ ಹೊರಗೆ ಎಲ್ಲರಿಗೂ ಸ್ಯಾನಿಟೈಸರ್‌ ನೀಡಿ, ಥರ್ಮಲ್‌ ಸ್ಕ್ರೀನಿಂಗ್‌ ನಡೆಸಲಾಯಿತು. ಮಾಸ್ಕ್‌ ಧರಿಸಿದವರನ್ನು ಒಳಗೆ ಬಿಡಲಾಯಿತು. ಮಾಸ್ಕ್‌ ಇಲ್ಲದೇ ಬಂದ ಕೆಲ ವಿದ್ಯಾರ್ಥಿಗಳಿಗೆ ಕೆಲವು ಸಂಘಟನೆಗಳ ಕಾರ್ಯಕರ್ತರು ಮಾಸ್ಕ್ ಹಂಚಿದರು.

ಮೊದಲ ದಿನದಂತೆಯೇ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಎರಡು ಸಾಲುಗಳನ್ನು ಮಾಡಿ ನಿಲ್ಲಿಸಿ, ತಪಾಸಣೆ ಮಾಡಲಾರಿತು.

ಒಟ್ಟು 209 ಪರೀಕ್ಷಾ ಕೇಂದ್ರಗಳಲ್ಲಿ 20 ಸೂಕ್ಷ್ಮ ಹಾಗೂ 4 ಕೇಂದ್ರಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಒಟ್ಟು 5977 ಸಿಬ್ಬಂದಿ ನಿಯೋಜಿಸಲಾಗಿದೆ.

ಜುಲೈ 19ರಂದು ನಡೆದ ಮೊದಲ ದಿನದ ಪರೀಕ್ಷೆಗಳ ವೇಳೆ ಅನಾರೋಗ್ಯ ಕಂಡುಬಂದಿದ್ದ ಏಳು ಮಕ್ಕಳಿಗೆ ಪ್ರತ್ಯೇಕವಾಗಿ ವಿಶೇಷ ಕೊಠಡಿಯಲ್ಲಿ ಪರೀಕ್ಷೆಗೆ ಅವಕಾಶ ನೀಡಲಾಗಿತ್ತು. ಅವರನ್ನು ಗುರುವಾರ ಕೂಡ ಅದೇ ವಿಶೇಷ ಕೊಠಡಿಗೆ ಕಳುಹಿಸಲಾಯಿತು.

ಕೋವಿಡ್ ಸೋಂಕು ತಗಲಿದ ಸೇಡಂನ ವಿದ್ಯಾರ್ಥಿನಿಯೊಬ್ಬರಿಗೆ ಈ ಪರೀಕ್ಷೆಗಳನ್ನೂ ಕೋವಿಡ್ ಆರೈಕೆ ಕೇಂದ್ರದಲ್ಲೇ ತೆಗೆದುಕೊಳ್ಳಲಾಯಿತು.

ಕಲಬುರ್ಗಿಯ ಎಸ್.ಬಿ.ಆರ್. ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.