ADVERTISEMENT

ಸುಲೇಪೇಟ ಠಾಣೆ ಪಿಎಸ್‌ಐ ಅಮಾನತು

​ಪ್ರಜಾವಾಣಿ ವಾರ್ತೆ
Published 10 ಮೇ 2020, 15:51 IST
Last Updated 10 ಮೇ 2020, 15:51 IST
ಕಲಬುರಗಿ ಜಿಲ್ಲಾ ಪೊಲೀಸ್
ಕಲಬುರಗಿ ಜಿಲ್ಲಾ ಪೊಲೀಸ್    

ಕಲಬುರ್ಗಿ: ಚಿಂಚೋಳಿ ತಾಲ್ಲೂಕಿನ ಪೋತಂಗಲ್ ಗ್ರಾಮದಲ್ಲಿ ಜಗಳವನ್ನು ಬಿಡಿಸಲು ಹೋಗಿದ್ದ ವಕೀಲ ನಾರಾಯಣರೆಡ್ಡಿ ಪಾಟೀಲ (60) ಅವರನ್ನು ಕಲ್ಲು ಕಟ್ಟಿಗೆಯಿಂದ ಗುಂಪೊಂದು ಹೊಡೆದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಕಾರಣಕ್ಕೆ ಸುಲೇಪೇಟ ಪೊಲೀಸ್‌ ಠಾಣೆ ಪಿಎಸ್‌ಐ ತಿಮ್ಮಯ್ಯ ಅವರನ್ನು ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್‌ಅಮಾನತು ಮಾಡಿದ್ದಾರೆ.

ಗ್ರಾಮದಲ್ಲಿ ಇತ್ತೀಚೆಗೆ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಡಂಗೂರ ಸಾರಿಸುವ ಸಂದರ್ಭದಲ್ಲಿ ಗ್ರಾಮದ ವಿಶ್ವನಾಥರೆಡ್ಡಿ ಪಾಟೀಲ ಹಾಗೂ ಸ್ಥಳೀಯರ ಮಧ್ಯೆ ಜಗಳ ಉಂಟಾಗಿದೆ. ಆಗ ಜಗಳ ಬಿಡಿಸಲು ಹೋಗಿದ್ದ ನಾರಾಯಣರೆಡ್ಡಿ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ವಿಶ್ವನಾಥರೆಡ್ಡಿ ಅವರೂ ಗಾಯಗೊಂಡಿದ್ದಾರೆ. ಈ ಪ್ರಕರಣವನ್ನು ಸರಿಯಾಗಿ ನಿರ್ವಹಿಸದ ಕಾರಣಕ್ಕೆ ಪಿಎಸ್‌ಐ ಅವರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಕಚೇರಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT