ಅಫಜಲಪುರ ತಾಲೂಕಿನ ಬಳ್ಳೂರ್ಗಿ–ಹಳಿಯಾಳ ಮಾರ್ಗದ ಹಳೆ ಹಾಳಾಗಿರುವುದು
ಅಫಜಲಪುರ: ತಾಲ್ಲೂಕಿನ ಬಳ್ಳೂರ್ಗಿ ಗ್ರಾಮದಿಂದ ಹಳ್ಯಾಳ ಗ್ರಾಮದವರೆಗೆ ಸಂಚರಿಸುವ ಸುಮಾರು 4 ಕಿಲೋ ಮೀಟರ್ ರಸ್ತೆ, ಸಂಪೂರ್ಣ ಹಾಳಾಗಿದ್ದು, ಜನರು ಮತ್ತು ರೈತರು ಸಂಚರಿಸಲು ನಿತ್ಯ ಪರದಾಡುವಂತಾಗಿದೆ.
ಬಳ್ಳೂರ್ಗಿ ಗ್ರಾಮದಿಂದ ಹಲ್ಯಾಳ ಗ್ರಾಮಕ್ಕೆ ಸಂಚರಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಮಳೆ ಬಂದರೆ ಸಂಚಾರ ಸ್ಥಗಿತವಾಗುತ್ತದೆ. ಯಾವುದೇ ವಾಹನಗಳು ಸಂಚಾರ ಮಾಡಲು ಸಾಧ್ಯವಾಗುವುದಿಲ್ಲ.
ಈ ರಸ್ತೆಯಲ್ಲಿಯೇ ಬಳ್ಳೂರ್ಗಿ ಗ್ರಾಮದ ರೈತರ ಜಮೀನುಗಳಿದ್ದು ಪ್ರತಿದಿನ ಜಮೀನು ಕೆಲಸಕ್ಕಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ತೋಟದ ಬೆಳೆಯನ್ನು ಮಾರುಕಟ್ಟೆಗೆ ಸಾಗಾಟ ಮಾಡಲು ಸಾಧ್ಯವಾಗುತ್ತಿಲ್ಲ. ಜನರು ಮಳೆ ಬಂದಾಗ ತಲೆ ಮೇಲೆ ಹೊತ್ತು ಹುಟ್ಟುವಳಿಗಳನ್ನು ಸಾಗಾಟ ಮಾಡುತ್ತಾರೆ. ಜನಪ್ರತಿನಿಧಿಗಳು ತಕ್ಷಣ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಬಳ್ಳೂರ್ಗಿ ಗ್ರಾಮದಿಂದ ಹಳ್ಯಾಳದವರೆಗೆ ರಸ್ತೆ ಹದಗೆಟ್ಟಿದ್ದು, ಮಳೆಗಾಲ ಮುಗಿಯುವವರೆಗೆ ಗರ್ಸುಹಾಕಿ ರಸ್ತೆ ದುರಸ್ತಿ ಮಾಡಬೇಕು ಎಂದು ರೈತ ಮುಖಂಡರಾದ ಶ್ರೀಮಂತ ಪಾಟೀಲ್ ಹಾಗೂ ಸದ್ದಾಂ ಅತ್ತಾರ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.