ADVERTISEMENT

ಕೋವಿಡ್-‌19: ಕಲಬುರ್ಗಿಯಲ್ಲಿ ಭಾಗಶಃ ಲಾಕ್‌ಡೌನ್ 

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 11:34 IST
Last Updated 22 ಏಪ್ರಿಲ್ 2021, 11:34 IST
   

ಕಲಬುರ್ಗಿ:21ರಿಂದಮೇ4ರವರೆಗೆ ರಾತ್ರಿ ಕರ್ಫ್ಯೂಹಾಗೂವಾರಾಂತ್ಯದಲ್ಲಿಪೂರ್ಣಪ್ರಮಾಣದಕರ್ಫ್ಯೂ ಎಂದು ಮುಂಚೆ ಘೋಷಣೆ ಮಾಡಿದ್ದರೂ ಕೊರೊನಾ ಸೋಂಕು ವ್ಯಾಪಕವಾಗುತ್ತಿರುವುದರಿಂದ ಇನ್ನಷ್ಟು ಕಠಿಣ ಕ್ರಮಕ್ಕೆ ಮುಂದಾಗಿರುವ ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ನಗರದ ವಿವಿಧೆಡೆಗುರುವಾರಮಧ್ಯಾಹ್ನದಿಂದ ಅಂಗಡಿಗಳನ್ನು ಬಂದ್ ಮಾಡಿಸಿವೆ.

ಇದರಿಂದಾಗಿ ನಗರದೆಲ್ಲೆಡೆ ಅಘೋಷಿತ ಲಾಕ್‌ಡೌನ್ ಜಾರಿಗೆ ಬಂದಂತಾಯಿತು. ಬೇಕರಿಗಳನ್ನೂ ಬಂದ್ ಮಾಡಿಸಲಾಗಿದ್ದು, ಹೋಟೆಲ್‌ಗಳಲ್ಲಿ ಪಾರ್ಸೆಲ್ ಒಯ್ಯಲು ಮಾತ್ರ ಅನುಮತಿ ನೀಡಲಾಗಿದೆ. ಕಿರಾಣಿ ಅಂಗಡಿ, ಔಷಧಿ ಅಂಗಡಿ, ಆಸ್ಪತ್ರೆ ಹಾಗೂ ಸಾರಿಗೆ ವ್ಯವಸ್ಥೆಗೆ ಯಾವುದೇ ಅಡ್ಡಿಯಾಗಿಲ್ಲ.

ಬಹುತೇಕ ವಾಣಿಜ್ಯ ವಹಿವಾಟು ಸ್ಥಗಿತಗೊಂಡಿದ್ದರಿಂದ ನಗರದ ರಸ್ತೆಗಳಲ್ಲಿ ಜನಸಂಚಾರವೂ ವಿರಳವಾಗಿತ್ತು. ಬಸ್‌ ಸಂಚಾರ ಆರಂಭಗೊಂಡಿದ್ದರೂ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಕಂಡು ಬಂತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.