
ಕಮಲಾಪುರ: ತಾಲ್ಲೂಕಿನ ಓಕಳಿ ಗ್ರಾಮದಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ ನಗದು ಕಳವು ಮಾಡಿ ಪರಾರೀಯಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಬಸವರಾಜ ಕ್ವಾಟಿ ಎಂಬವವರ ಮನೆಯ ಬೀಗ ಮುರಿಯಲಾಗಿದ್ದು ಮನೆಯಲ್ಲಿಟ್ಟಿದ್ದ 30 ಗ್ರಾಮ ಚಿನ್ನಾಭರಣ ಹಾಗೂ ₹60 ಸಾವಿರ ನಗದು ಕಳುವಾಗಿದೆ.
ಹಸು ಖರೀದಿಗಾಗಿ ಭಾನುವಾರ ಬಸವಕಲ್ಯಾಣಕ್ಕೆ ಸಂತೆಗೆ ತೆರಳಿದ್ದೆ, ಹಸು ಸಿಗದಿದ್ದಕ್ಕೆ ₹60 ಸಾವಿರ ಮನೆಯಲ್ಲಿಟ್ಟಿದ್ದೆ. ನಿತ್ಯದಂತೆ ಹೊಲಕ್ಕ ಹೋಗಿದ್ದೆ ಸಂಜೆ ಬಂದು ನೋಡುವಷ್ಟರಲ್ಲಿ ಮನೆಯ ಬೀಗ ಮುರಿದಿತ್ತು. ಸಂದೂಕು ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು ಎಂದು ಬಸವರಾಜ ತಿಳಿಸಿದರು. ಕಮಲಾಪುರ ಪೂಲೀಸ ಠಾಣೆಗೆ ದೂರು ನೀಡಿದ್ದು, ಅಪರಾಧ ವಿಭಾಗದ ಪಿಎಸ್ಐ ಚೇತನ, ಸಿಬ್ಬಂಧಿಗಳಾದ ಬಿದ್ದು ರಾಠೋಡ್, ಅನಿಲ, ಶ್ವಾನದಳ, ಬೆರಳಚ್ಚುಗಾರರು ಆಗಮಿಸಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.