ಅಫಜಲಪುರ: ತೋಟಗಾರಿಕೆ ಇಲಾಖೆ ಮೂಲಕ ನಿರ್ಮಾಣ ಮಾಡಿರುವ ದೊಡ್ಡ ಕೃಷಿ ಹೊಂಡದಲ್ಲಿ ಎಮ್ಮೆಗೆ ನೀರು ಕುಡಿಸಲು ಹೋಗಿದ್ದ ರೈತ ಕಾಲು ಜಾರಿ ಬಿದ್ದು ಈಜು ಬಾರದೆ ಮೃತಪಟ್ಟ ಘಟನೆ ತಾಲ್ಲೂಕಿನ ಉಡಚಣ ಹಟ್ಟಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಅಂಬಣ್ಣ ಸಂಜೆವಾಡ (46) ಮೃತ ದುರ್ದೈವಿ.
ಸುದ್ದಿ ತಿಳಿದ ಕೃಷಿ ಹೊಂಡ ಸುತ್ತಮುತ್ತಲಿನ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು ಓಡಿ ಹೋಗುವಷ್ಟರಲ್ಲೇ ರೈತನ ಪ್ರಾಣ ಹೋಗಿತ್ತು. ರೈತರು ಕೃಷಿ ಹೊಂಡವನ್ನ ಒಡೆದು ನೀರು ಹೊರಗೆ ಹಾಕಿದರೂ ರೈತ ಉಳಿಯಲಿಲ್ಲ.
ಈವರೆಗೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದಿಲ್ಲ.
ಕೆಲ ದಿನಗಳ ಹಿಂದಷ್ಟೇ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳು ಕೃಷಿ ಹೊಂಡಗಳಿಗೆ ತಂತಿ ಬೇಲಿ ಹಾಕಲು ಆದೇಶ ಮಾಡಿದ್ದರು. ಈವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ತಾಲೂಕಿನಲ್ಲಿ ವಿವಿಧ ಯೋಜನೆಗಳಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಸುಮಾರು ಹತ್ತು ಸಾವಿರ ಕೃಷಿ ಹೊಂಡಗಳನ್ನು ತೋಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.