ADVERTISEMENT

ಉಜ್ವಲಾ ಯೋಜನೆ: ರಾಜ್ಯದಲ್ಲಿ ಎಲ್‌ಪಿಜಿ ಮರುಪೂರಣ ಮಾಡಿಕೊಳ್ಳದ 2 ಲಕ್ಷ ಬಳಕೆದಾರರು

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 0:30 IST
Last Updated 18 ಜುಲೈ 2025, 0:30 IST
<div class="paragraphs"><p>ಕಮಿಷನ್‌ ಹೆಚ್ಚಳಕ್ಕೆ ಎಲ್‌ಪಿಜಿ ವಿತರಕರ ಗಡುವು</p></div>

ಕಮಿಷನ್‌ ಹೆಚ್ಚಳಕ್ಕೆ ಎಲ್‌ಪಿಜಿ ವಿತರಕರ ಗಡುವು

   

ಕಲಬುರಗಿ: ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ರಾಜ್ಯದಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕ ಪಡೆದಿರುವ 18,32,338 ಬಳಕೆದಾರರಲ್ಲಿ, 2024–25ನೇ ಸಾಲಿನಲ್ಲಿ 2,07,344 ಬಳಕೆದಾರರು ಒಮ್ಮೆಯೂ ಸಿಲಿಂಡರ್ ಮರುಪೂರಣ ಮಾಡಿಕೊಂಡಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಮಾಹಿತಿ ನೀಡಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಜಿಲ್ಲೆಯ ಆರ್‌ಟಿಐ ಕಾರ್ಯಕರ್ತ, ವಕೀಲ ಭೀಮನಗೌಡ ಪರಗೊಂಡ ಅವರು ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ನಿಗಮವು, ರಾಜ್ಯದಲ್ಲಿ 2024–25ನೇ ವರ್ಷ 16,24,994 ಫಲಾನುಭವಿಗಳಷ್ಟೇ ಸಿಲಿಂಡರ್ ಮರುಪೂರಣ ಮಾಡಿಸಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.