ADVERTISEMENT

ಜೇವರ್ಗಿ: ಅನಧಿಕೃತ ಮಳಿಗೆ ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:09 IST
Last Updated 14 ಡಿಸೆಂಬರ್ 2025, 6:09 IST
ಜೇವರ್ಗಿ : ಪಟ್ಟಣದ ಎಪಿಎಂಸಿ ಕಚೇರಿಯ ಎದುರು ಅನಧಿಕೃತ ಮಳಿಗೆ ತೆರವಿಗೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಜೇವರ್ಗಿ : ಪಟ್ಟಣದ ಎಪಿಎಂಸಿ ಕಚೇರಿಯ ಎದುರು ಅನಧಿಕೃತ ಮಳಿಗೆ ತೆರವಿಗೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.   

ಜೇವರ್ಗಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ಅನಧಿಕೃತ ಮಳಿಗೆಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಜಯ-ಕರ್ನಾಟಕ ಸಂಘಟನೆ ವತಿಯಿಂದ ಎಪಿಎಂಸಿ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು.

ಎಪಿಎಂಸಿಯಲ್ಲಿರುವ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಬೇಕು. ಎಪಿಎಂಸಿ ಸುತ್ತ ಕಾಂಪೌಂಡ್ ಗೋಡೆ ನಿರ್ಮಿಸಬೇಕು. ಹಿಂದೆ ನಿರ್ಮಿಸಿದ ಕಾಂಪೌಂಡ್ ಗೋಡೆ ತೆರವುಗೊಳಿಸಿದವರ ವಿರುದ್ಧ ಸೂಕ್ತ ಕ್ರಮತೆಗೆದುಕೊಳ್ಳಬೇಕು. ಎಪಿಎಂಸಿ ಮಾರುಕಟ್ಟೆಯಲ್ಲಿ ಬಹುತೇಕ ಮಳಿಗೆಗಳು ಕೃಷಿಯೇತರ ವ್ಯಾಪಾರ ನಡೆಯುತ್ತಿರುವುದು ಕಾನೂನು ಬಾಹಿರ. ಕೂಡಲೇ ತೆರವುಗೊಳಿಸಿ ಸುತ್ತ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಂಘಟನೆ ತಾಲ್ಲೂಕು ಅಧ್ಯಕ್ಷ ಭೀಮಾಶಂಕರ ಬಿಲ್ಲಾಡ ಜನಿವಾರ, ಗೌರವಾಧ್ಯಕ್ಷ ಪರಮೇಶ್ವರ ಬಿರಾಳ, ಸಿದ್ದಣಗೌಡ ಮಾವನೂರ, ಮಹಾಂತೇಶ ಹಾದಿಮನಿ, ಮುನೀರ್ ಪಾಶಾ, ವೆಂಕಟೇಶ ಪಟ್ಟೇದಾರ, ಲಕ್ಷ್ಮಣ ಮಾವನೂರ, ಚಂದ್ರು ನಾಟೀಕಾರ, ಮಲ್ಲಿಕಾರ್ಜುನ ಬಿರಾದಾರ, ರವಿ ಪಾಟೀಲ, ಯಲ್ಲಪ್ಪ ದೊರಿ, ಶಕೀಲ್ ಬಡಾಘರ, ಬಾಬಾ ಫಕ್ರುದ್ದೀನ್, ಗಾಲಿಬ್ ಗಾಯಕವಾಡ, ಮಲ್ಲೇಶಿ ಬೂತನಾಳ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.