ADVERTISEMENT

ಕಲಬುರಗಿ | ವಚನ–ತತ್ವಪದಗಳ ಆಶಯ ಒಂದೇ: ಸಂಗನಗೌಡ ಹಿರೇಗೌಡ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 7:01 IST
Last Updated 22 ಡಿಸೆಂಬರ್ 2025, 7:01 IST
ಕಲಬುರಗಿಯ ಜಯನಗರ ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ದತ್ತಿ ದಾನಿ ಚಂದ್ರಕಾಂತ ಘಂಟಿ ಅವರನ್ನು ವಿಲಾಸವತಿ ಖೂಬಾ ಗೌರವಿಸಿದರು. ಸಹಾಯಕ ಪ್ರಾಧ್ಯಾಪಕ ಸಂಗನಗೌಡ ಹಿರೇಗೌಡ ಇದ್ದಾರೆ
ಕಲಬುರಗಿಯ ಜಯನಗರ ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ದತ್ತಿ ದಾನಿ ಚಂದ್ರಕಾಂತ ಘಂಟಿ ಅವರನ್ನು ವಿಲಾಸವತಿ ಖೂಬಾ ಗೌರವಿಸಿದರು. ಸಹಾಯಕ ಪ್ರಾಧ್ಯಾಪಕ ಸಂಗನಗೌಡ ಹಿರೇಗೌಡ ಇದ್ದಾರೆ   

ಕಲಬುರಗಿ: ‘ವಚನ ಸಾಹಿತ್ಯ ಮತ್ತು ತತ್ವಪದಗಳು ಒಂದೇ ಸಿದ್ಧಾಂತ ಸಾರುವ ಉದ್ದೇಶ ಹೊಂದಿವೆ. ಅನುಭವದ ಸಮಾಜ ಕಟ್ಟುವುದು ಬಸವಣ್ಣನವರ ನಿಲುವಾಗಿತ್ತು. ತತ್ವಪದಕಾರರು ಕೂಡ ಅದೇ ಆಶಯ ಹೊಂದಿದವರಾಗಿದ್ದರು’ ಎಂದು ಖಾಜಾ ಬಂದಾನವಾಜ್‌ ವಿ.ವಿಯ ಸಹಾಯಕ ಪ್ರಾಧ್ಯಾಪಕ ಸಂಗನಗೌಡ ಹಿರೇಗೌಡ ಹೇಳಿದರು.

ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ಬಸವ ಸಮಿತಿಯಿಂದ ಭಾನುವಾರ ದಿ.ಗುರುಪಾದಪ್ಪ ಶಿವಲಿಂಗಪ್ಪ ಘಂಟಿ ಸ್ಮರಣಾರ್ಥ ಜರುಗಿದ ಅರಿವಿನ ಮನೆ– 880ನೇ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅನಕ್ಷರಸ್ಥ ಜನಪದರು ಭಜನೆಗಳಲ್ಲಿ ವಚನಗಳನ್ನು ಹೇಳುತ್ತಾರೆ. ವಚನ ಸಾಹಿತ್ಯ ಹುಟ್ಟಿದ್ದು 12ನೇ ಶತಮಾನದಲ್ಲಿ. ತತ್ವಪದಗಳು ಹುಟ್ಟಿದ್ದು 18ನೇ ಶತಮಾನದಲ್ಲಿ. ವಚನ ಮತ್ತು ತತ್ವಪದಗಳು ಅನ್ನೋನ್ಯವಾಗಿ ಅನನ್ಯವಾಗಿ ಬೆಳೆದು ಬಂದಿವೆ. ವಚನಗಳ ನಿದರ್ಶನ ಹೇಳಿ ಒಂದು ತೀರ್ಮಾನಕ್ಕೆ ಬಂದರೆ, ತತ್ವಪದಗಳು ಒಂದು ತೀರ್ಮಾನ ಹೇಳಿ ನಿದರ್ಶನ ಹೇಳುತ್ತವೆ’ ಎಂದರು.

ADVERTISEMENT

‘ವಚನಗಳಲ್ಲಿ ಜನಸಾಮಾನ್ಯರನ್ನು ಹಿಡಿದಿಡುವ ಶಕ್ತಿ ಇದೆ. ಹೀಗಾಗಿಯೇ ಅವು ಇಂದಿಗೂ ಜನ ಸಾಮಾನ್ಯರಲ್ಲಿ ಉಳಿದಿವೆ. ಲಿಂಗವನ್ನು ಪೂಜಿಸಿ ಲಿಂಗವಾಗು ಎಂದು ವಚನಕಾರರು ಹೇಳಿದರೆ, ಅಂಗದ ಗುಣಗಳನ್ನು ಅಳಿಯಬೇಕು ಎಂದು ತತ್ವಪದಕಾರರು ಹೇಳಿದ್ದಾರೆ. ಹೀಗಾಗಿ ವಚನ ಸಾಹಿತ್ಯ ಮತ್ತು ತತ್ವಪದ ಸಾಹಿತ್ಯದಲ್ಲಿ ತೀರ ಹತ್ತಿರದ ಸಾಮ್ಯತೆ ಕಾಣುತ್ತೇವೆ’ ಎಂದರು.

ಕಲಬುರಗಿ ಬಸವ ಸಮಿತಿಯ ಅಧ್ಯಕ್ಷೆ ವಿಲಾಸವತಿ ಖೂಬಾ, ಉಪಾಧ್ಯಕ್ಷೆ ಜಯಶ್ರೀ ದಂಡೆ, ಕಾರ್ಯದರ್ಶಿ ಆನಂದ ಸಿದ್ಧಾಮಣಿ , ಕೆ.ಎಸ್.ವಾಲಿ, ಶರಣಗೌಡ ಪಾಟೀಲ ಪಾಳಾ, ಬಂಡಪ್ಪ ಕೇಸುರ್, ದತ್ತಿ ದಾಸೋಹಿ ಚಂದ್ರಕಾಂತ ಘಂಟಿ, ಉದ್ದಂಡಯ್ಯ ಭಾಗವಹಿಸಿದ್ದರು.