ಶಹಾಬಾದ್: ‘ತಾಲ್ಲೂಕಿನಲ್ಲಿ ನೂರಾರು ಅಶಕ್ತ, ಅನಾಥ, ಕಡುಬಡವರ, ದುರ್ಬಲ ಕುಟುಂಬಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಪ್ರತಿ ತಿಂಗಳು ₹1,000 ಮಾಸಾಶನ ವಿತರಣೆ ಮಾಡಲಾಗುತ್ತಿದೆ. ಸಂಸ್ಥೆಯ ವಿವಿಧ ಸಾಮಾಜಿಕ ಸೇವೆಗಳು ಶ್ಲಾಘನೀಯ’ ಎಂದು ಜನ ಜಾಗೃತಿ ವೇದಿಕೆಯ ಸದಸ್ಯ ವಾಸುದೇವ ಚವ್ಹಾಣ ಹೇಳಿದರು.
ಅವರು ನಗರದ ಹಳೆ ಶಹಾಬಾದ್ ಬಡಾವಣೆಯಲ್ಲಿ ನಡೆದ ವಾತ್ಸಲ್ಯ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಹೆಚ್‌ಪಿ ಗೌರವ ಅಧ್ಯಕ್ಷ ಬಸವರಾಜ ಸಾತ್ಯಾಳ ಮಾತನಾಡಿದರು.
ಹಳೆ ಶಹಾಬಾದ್ ವಲಯ ಮೇಲ್ವಿಚಾರಕಿ ಜಯಶ್ರೀ ಬನ್ನಿಗೋಳ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಅರ್ಚನಾ, ಸೇವಾ ಪ್ರತಿನಿಧಿ ಅನುಜಾ ದಂಡಗುಲಕರ, ಸೋಮಶೇಖರ ಅಣಬಿ ಪಾಲ್ಗೊಂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.