ಕಲಬುರ್ಗಿ: ತಾಲ್ಲೂಕಿನ ಹಾಗರಗುಂಡಗಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಗ್ರಾಮಸ್ಥರು ಭಾನುವಾರ ಬೆಳಿಗ್ಗೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಹಾಗರಗುಂಡಗಿಯಿಂದ ಜನರು ನಿತ್ಯ ಕಲಬುರ್ಗಿಗೆ ಬಂದು ಹೋಗುತ್ತಾರೆ. ಕೆಲಸದ ನಿಮಿತ್ತ, ಸರ್ಕಾರಿ ನೌಕರಿ, ಶಾಲಾ ಕಾಲೇಜು ಸೇರಿ ಪ್ರತಿಯೊಂದಕ್ಕೂ ಗ್ರಾಮಸ್ಥರು ಕಲಬುರ್ಗಿ ಮೇಲೆ ಅವಲಂಬಿತರಾಗಿದ್ದಾರೆ. ಈ ಮುಂಚೆ ಗ್ರಾಮದಿಂದ ಒಂದು ಬಸ್ ಕಲಬುರ್ಗಿಗೆ ಓಡಿಸಲಾಗುತಿತ್ತು. ಆದರೆ, ಲಾಕ್ಡೌನ್ ಬಳಿಕ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ:ಮೊದಲು ಲಸಿಕೆ ಪಡೆದವರ ಮನದಾಳ
ಬಸ್ ಇಲ್ಲದೆ ನಿತ್ಯ ಗೋಳಾಟ ನಡೆದಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಾರಿಗೆ ಸಂಸ್ಥೆ ಅಧಿಕಾರಿಗಳು ಸ್ಪಂದಿಸದ ಕಾರಣ ಬೆಳಿಗ್ಗೆ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದರು. ಪಕ್ಕದ ಮೈನಾಳ ಗ್ರಾಮಕ್ಕೆ ತೆರಳಿದ್ದ ಬಸ್ ತಡೆದು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.