ADVERTISEMENT

ವಾಡಿ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಸಂಗನಗೌಡ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 6:55 IST
Last Updated 9 ಸೆಪ್ಟೆಂಬರ್ 2025, 6:55 IST
ಸಂಗನಗೌಡ
ಸಂಗನಗೌಡ   

ವಾಡಿ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ರವಿವಾರ ಜರುಗಿದ ಚುನಾವಣೆಯಲ್ಲಿ ಇಂಗಳಗಿ ಪ್ರಾಥಮಿಕ ಶಾಲೆ ಸಹಶಿಕ್ಷಕ ಸಂಗನಗೌಡ ಎಸ್ ಮಲ್ಲೇದ ಚಿತ್ತಾಪುರ ತಾಲ್ಲೂಕು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಹ ನಡೆಯಿತು. ಅಂಬಣ್ಣ ಘಂಟಿ(ಪ್ರಧಾನ ಕಾರ್ಯದರ್ಶಿ), ರಾಜಕುಮಾರ ಜಮಾದಾರ(ಉಪಾಧ್ಯಕ್ಷ), ಅಮರನಾಥ(ಸಂಘಟನೆ ಕಾರ್ಯದರ್ಶಿ), ಸುರೇಶ ಓಂಕಾರ(ಖಜಾಂಚಿ) ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾಧ್ಯಕ್ಷ ಸೈಯದ್‌ ಇನಾಂದಾರ, ಪ್ರಧಾನ ಕಾರ್ಯದರ್ಶಿ ಮಹಾದೇವ ಚಿತಲಿ, ಶಾಹಾಬಾದ ತಾಲ್ಲೂಕು ಅಧ್ಯಕ್ಷ ಆನಂದ ಕುಮಾರ ಜಾಧವ, ಉಪಾಧ್ಯಕ್ಷ ಪ್ರಭಾಕರ ಶೀಲವಂತ, ಶಿಕ್ಷಕರಾದ ಮಂಜುನಾಥ ಪಾಟೀಲ್, ಸಿದ್ದಣ್ಣ ಹಡಪದ, ನಾಗಣ್ಣಗೌಡ, ವಿಶ್ವನಾಥ, ಗುಲಾಂ ಜಿಲಾನಿ ಹಾಗೂ ಇನ್ನಿತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.