ADVERTISEMENT

‘ಬದುಕಿಗೆ ಪುಸ್ತಕಗಳೇ ದಾರಿದೀಪ’

ಕೆಕ್ಕರ್ ಸಾವಳಗಿ ಸರ್ಕಾರಿ ಶಾಲೆಯಲ್ಲಿ ಪುಸ್ತಕ ಮೇಳ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 11:33 IST
Last Updated 7 ಡಿಸೆಂಬರ್ 2021, 11:33 IST
ಅಫಜಲಪುರ ತಾಲ್ಲೂಕಿನ ಕೆಕ್ಕರ್ ಸಾವಳಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಪುಸ್ತಕ ಮೇಳದಲ್ಲಿ ಸಾಹಿತಿ ಪರಮಾನಂದ  ಮಾತನಾಡಿದರು
ಅಫಜಲಪುರ ತಾಲ್ಲೂಕಿನ ಕೆಕ್ಕರ್ ಸಾವಳಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಪುಸ್ತಕ ಮೇಳದಲ್ಲಿ ಸಾಹಿತಿ ಪರಮಾನಂದ  ಮಾತನಾಡಿದರು   

ಅಫಜಲಪುರ: ‘ಮಕ್ಕಳು ಮನೆಯಲ್ಲಿ ಒಂದು ಪುಟ್ಟ ಗ್ರಂಥಾಲಯ ಹೊಂದಿದರೆ ಬದುಕಿಗೆ ಅದು ದಾರಿದೀಪವಾಗುತ್ತದೆ. ಎಲ್ಲ ಆಸ್ತಿಗಿಂತಲೂ ಪುಸ್ತಕಗಳು ಎಂದೆಂದಿಗೂ ದೊಡ್ಡ ಆಸ್ತಿ’ ಎಂದು ಸಾಹಿತಿ ಪರಮಾನಂದ ಸರಸಂಬಿ ಹೇಳಿದರು.

ತಾಲ್ಲೂಕಿನ ಕೆಕ್ಕರ್ ಸಾವಳಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಪುಸ್ತಕ ಮೇಳ ಸಮಾರಂಭದಲ್ಲಿ ಮಾತನಾಡಿದ ಅವರು, ‘ಒಂದು ಗ್ರಂಥಾಲಯ ಕಟ್ಟಿದರೆ ನೂರಾರು ವಿದ್ವಾಂಸರು ಹುಟ್ಟುತ್ತಾರೆ’ ಎಂಬ ಬಾಬಾಸಾಹೇಬರ ಮಾತನ್ನು ಮಕ್ಕಳಿಗೆ ನೆನಪಿಸಿದರು.

‘ನಾವೆಲ್ಲರೂ ಆಧುನಿಕತೆಯ ಭರಾಟೆಯಲ್ಲಿ ಪುಸ್ತಕ ಓದುವುದನ್ನು ಕಡಿಮೆ ಮಾಡಿದ್ದೇವೆ. ಓದುವುದನ್ನು ನಿಲ್ಲಿಸಿದರೆ, ನಿಜವಾದ ಸಂತಸ ಮತ್ತು ಜ್ಞಾನದಿಂದ ವಂಚಿತರಾಗುತ್ತೇವೆ. ತಂದೆ-ತಾಯಿ ಮತ್ತು ಸಂಬಂಧಿಕರು ಕೊಟ್ಟ ಹಣದಲ್ಲಿ ಕನಿಷ್ಠ ಅರ್ಧ ಭಾಗವನ್ನು ಉಳಿಸಿ ಪುಸ್ತಕಗಳನ್ನು ಖರೀದಿಸಬೇಕು’ ಎಂದು ಅವರು ಸಲಹೆ ನೀಡಿದರು.

ADVERTISEMENT

‘ಶಾಲಾ ಗ್ರಂಥಾಲಯದಲ್ಲಿನ ಎಲ್ಲ ಪುಸ್ತಕಗಳನ್ನು ದಿನವಿಡೀ ಪ್ರದರ್ಶನಕ್ಕೆ ಇಡಲಾಗಿತ್ತು. ಸರದಿಯಂತೆ ಆಯಾ ತರಗತಿಯ ಮಕ್ಕಳಿಗೆ ಪುಸ್ತಕಗಳನ್ನು ನೋಡಲು, ಓದಲು ಮತ್ತು ಪುಸ್ತಕಗಳ ಮಾಹಿತಿಯನ್ನು ಶಿಕ್ಷಕರು ನೀಡಿದರು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕುಪೇಂದ್ರ ಪೂಜಾರಿ, ಮುಖ್ಯಶಿಕ್ಷಕ ಮನೋಹರ ಪಾಟೀಲ, ಶಿಕ್ಷಕರಾದ ಜಾವೀದ ಹುಂಡೇಕಾರ, ಸಂಗೀತಾ ಬುಳ್ಳಾ, ದೇವೇಂದ್ರ ರಾಠೋಡ ಮತ್ತು ಸಿದ್ದಪ್ಪ ವಾಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.