ಕಲಬುರಗಿ: ಕಾಡು ಹಂದಿಯ ಕಾಟದಿಂದ ರೈತರ ಜಮೀನುಗಳಲ್ಲಿನ ಬೆಳೆದಿರುವ ಬೆಳೆಗೆ ಭಾರಿ ಹಾನಿಯಾಗಿರುವ ಬಗ್ಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ದೂರುಗಳು ಬೀದರ್ ಜಿಲ್ಲೆಯಲ್ಲಿ ದಾಖಲಾಗಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಈ ಕುರಿತು ವಿಧಾನಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ‘ಬೀದರ್ ಜಿಲ್ಲೆಯಲ್ಲಿ 1724 ದೂರುಗಳು ಬಂದಿವೆ. ಕಲಬುರಗಿ ಜಿಲ್ಲೆಯಲ್ಲಿ 630, ವಿಜಯನಗರ ಜಿಲ್ಲೆಯಲ್ಲಿ 530, ಬಳ್ಳಾರಿ ಜಿಲ್ಲೆಯಲ್ಲಿ 81, ಕೊಪ್ಪಳ 6, ಯಾದಗಿರಿ 11 ಹಾಗೂ ರಾಯಚೂರು ಜಿಲ್ಲೆಯಲ್ಲಿ 1 ದೂರು ಬಂದಿವೆ. ಕಳೆದ 10 ವರ್ಷಗಳಲ್ಲಿ ಬೀದರ್ ಜಿಲ್ಲೆಯ 1643 ಪ್ರಕರಣಗಳಲ್ಲಿ ₹ 88.13 ಲಕ್ಷ ಪರಿಹಾರ, ಕಲಬುರಗಿಯಲ್ಲಿ 562 ಪ್ರಕರಣಗಳಲ್ಲಿ ₹ 81.20 ಲಕ್ಷ ಪರಿಹಾರ, ವಿಜಯ ನಗರ ಜಿಲ್ಲೆಯ 472 ಪ್ರಕರಣಗಳಲ್ಲಿ ₹ 28.80 ಲಕ್ಷ ಪರಿಹಾರ ಹಾಗೂ ಬಳ್ಳಾರಿಯ 60 ಪ್ರಕರಣಗಳಲ್ಲಿ ₹ 1.96 ಲಕ್ಷ ಪರಿಹಾರ ನೀಡಲಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.