ADVERTISEMENT

‘ಆದರ್ಶ ಬದುಕಿಗೆ ಗೀತೆಯ ಸಾರ ಅಗತ್ಯ’

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 12:28 IST
Last Updated 10 ಡಿಸೆಂಬರ್ 2019, 12:28 IST
ಹುಣಸಗಿ ತಾಲ್ಲೂಕಿನ ಕಾಮನಟಗಿ ಗ್ರಾಮದಲ್ಲಿ ನಡೆದ ಗೀತಾಜಯಂತಿ ಕಾರ್ಯಕ್ರಮದಲ್ಲಿ ವಿಪ್ರ ಪ್ರಮುಖ ಶ್ರೀಹರಿ ಆದವಾನಿ ಮಾತನಾಡಿದರು
ಹುಣಸಗಿ ತಾಲ್ಲೂಕಿನ ಕಾಮನಟಗಿ ಗ್ರಾಮದಲ್ಲಿ ನಡೆದ ಗೀತಾಜಯಂತಿ ಕಾರ್ಯಕ್ರಮದಲ್ಲಿ ವಿಪ್ರ ಪ್ರಮುಖ ಶ್ರೀಹರಿ ಆದವಾನಿ ಮಾತನಾಡಿದರು   

ಹುಣಸಗಿ: ಭಗವದ್ಗೀತೆ ಎಂಬುದು ಕೃಷ್ಣ ಪರಮಾತ್ಮ ಕೇವಲ ಅರ್ಜುನನಿಗೆ ಮಾತ್ರ ಬೊಧಿಸಿದ್ದಾನೆ, ಎಂದು ತಿಳಿದರೇ ಅದು ತಪ್ಪು. ಇಡಿ ಮಾನವ ಕುಲದ ಉದ್ದಾರಕ್ಕಾಗಿ ಗೀತೆಯಲ್ಲಿ ತಿಳಿಸಿಕೊಟ್ಟಿದ್ದಾರೆ ಎಂದು ವಿಪ್ರ ಪ್ರಮುಖ ಶ್ರೀ ಹರಿರಾವ ಆದವಾನಿ ಹೇಳಿದರು.

ಹುಣಸಗಿ ತಾಲ್ಲೂಕಿನ ಕಾಮನಟಗಿ ಗ್ರಾಮದಲ್ಲಿ ಹಮ್ಮಿಕೊಂಡ ಗೀತಾ ಜಯಂತಿಯಲ್ಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬದುಕಿನಲ್ಲಿ ಅಳವಡಿಸಿಕೊಳ್ಳಲು ಯಾವುದು ಸತ್ಯ, ಯಾವುದು ಮಿಥ್ಯ ಎಂಬುದನ್ನು ಭಗವಾನ್ ಕೃಷ್ಣ ಪರಮಾತ್ಮ ತನ್ನ ಮುಖವಾಣಿಯಿಂದ ಜಗತ್ತಿಗೆ ಗೀತೋಪದೇಶ ಮುಖಾಂತರ ತಿಳಿಸಿಕೊಟ್ಟಿ ದ್ದಾನೆ.ಯಾರು ಭಗವ ದ್ಗೀತೆಯ ಪಾರಾಯಣ, ಶ್ರವಣ ಮಾಡುತ್ತಾರೋ ಅವರಿಗೆ ನೆಮ್ಮದಿ ತಾನಾಗಿಯೇ ಲಭಿಸುತ್ತದೆ ಎಂದು ಗೀತೆಯ ಸಾರದ ಕುರಿತು ವಿವರಿಸಿದರು.

ADVERTISEMENT

ಸುರಪುರದ ವೇದವ್ಯಾಸ ಆಚಾರ್ಯ ಮಾತನಾಡಿದರು.

ನಿವೃತ್ತ ಶಿಕ್ಷಕ ಮನೋಹರರಾವ್ ದ್ಯಾಮನಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರಂಭದಲ್ಲಿ ಮಹಿಳಾ ಭಜನಾ ಮಂಡಳಿಯಿಂದ ಹರಿನಾಮಸ್ಮರಣೆ ಹಾಗೂ ಭಜನೆ ಕಾರ್ಯಕ್ರಮ ನಡೆಯಿತು.

ಶಾಮಸುಂದರ ಜೋಶಿ, ಯಾಜ್ಞವಲ್ಕ್ಯ ಸೇವಾ ಸಂಘದ ಅಧ್ಯಕ್ಷ ಡಾ. ಗೋವಿಂದರಾವ್ ಜಹಾಗಿರದಾರ, ಚಂದುರಾವ್ ಕುಲಕರ್ಣಿ, ದತ್ತಾತ್ರೇಯ ಜಹಾಗೀರದಾರ, ಕಿಶನರಾವ್ ಕುಲಕರ್ಣಿ, ನರಸಿಂಹರಾವ್ ಜಹಾಗಿರದಾರ, ಸುರೇಶ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.