ADVERTISEMENT

ಯಲ್ಲಾಲಿಂಗ ಮಹಾರಾಜರ ಅದ್ದೂರಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 6:36 IST
Last Updated 16 ಜನವರಿ 2026, 6:36 IST
ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಗ್ರಾಮದ ಯಲ್ಲಾಲಿಂಗ ಮಹಾರಾಜರ ಅದ್ದೂರಿ ರಥೋತ್ಸವ ಜರುಗಿತು
ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಗ್ರಾಮದ ಯಲ್ಲಾಲಿಂಗ ಮಹಾರಾಜರ ಅದ್ದೂರಿ ರಥೋತ್ಸವ ಜರುಗಿತು   

ಜೇವರ್ಗಿ: ತಾಲ್ಲೂಕಿನ ಸುಕ್ಷೇತ್ರ ಕಟ್ಟಿಸಂಗಾವಿ ಗ್ರಾಮದ ಭೀಮಾ ಬ್ರಿಡ್ಜ್ ಹತ್ತಿರದ ಯಲ್ಲಾಲಿಂಗ ಮಹಾರಾಜರ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಅದ್ದೂರಿ ರಥೋತ್ಸವ ಜರುಗಿತು.

ಜಾತ್ರೆ ಅಂಗವಾಗಿ ಹಲವಾರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬುಧವಾರ ಸಂಜೆ 5ಕ್ಕೆ ತೊಟ್ಟಿಲು ಕಾರ್ಯಕ್ರಮ, ದೀಪೋತ್ಸವ, ಸಂಗೀತ, ಮಹಾಪ್ರಸಾದ ಜರುಗಿತು.

ಗುರುವಾರ ಬೆಳಿಗ್ಗೆ ಶಿವಯೋಗಿಗಳ ಮೆರವಣಿಗೆ ಮತ್ತು ಗಂಗಾಸ್ನಾನ, ಸಿದ್ದಲಿಂಗೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ, ಅಲಂಕಾರ ಜರುಗಿತು. ಸಂಕ್ರಾಂತಿ ಹಬ್ಬದ ಅಂಗವಾಗಿ ಕಲಬುರಗಿ ಜಿಲ್ಲೆಯ ವಿವಿಧ ಭಾಗಗಳಿಂದ ಸಹಸ್ರಾರು ಜನ ಆಗಮಿಸಿ ಭೀಮಾನದಿಯ ಪುಣ್ಯಸ್ನಾನ ಮಾಡಿದರು.

ADVERTISEMENT

ಸಂಜೆ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಅದ್ದೂರಿ ರಥೋತ್ಸವ ನಡೆಯಿತು. ಈ ಸಂರ್ಭದಲ್ಲಿ ಪುರವಂತರ ಸೇವೆ, ಭಾಜಾ ಭಜಂತ್ರಿ ಹಲವು ಕಲಾ ತಂಡಗಳು ಭಾಗವಹಿಸಿದ್ದವು. ರಾತ್ರಿ ನಾಟಕ, ಸಂಗೀತ ಕಾರ್ಯಕ್ರಮ ಜರುಗಿತು.

ಶುಕ್ರವಾರ ಮಧ್ಯಾಹ್ನ 3ಕ್ಕೆ ಕುಸ್ತಿ ಪಂದ್ಯಗಳು ಜರುಗಲಿವೆ.

ರಥೋತ್ಸವದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ ನರಿಬೋಳ, ಜಿ.ಪಂ ಮಾಜಿ ಸದಸ್ಯ ಶಿವರಾಜ ಪಾಟೀಲ ರದ್ದೇವಾಡಗಿ, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಕಾರ್ಯದರ್ಶಿ ರಾಜಶೇಖರ ಸೀರಿ, ಮಲ್ಕಣ್ಣಗೌಡ ಗಂವ್ಹಾರ, ಚಂದ್ರಕಾಂತ ಸಾಹು ಬೆಲ್ಲದ್, ಮೌಲಾಲಿ, ಉತ್ತಮಗೌಡ ಪಾಟೀಲ, ಶ್ರೀಶೈಲ ಸಾಹು ಸಜ್ಜನ್, ಭೀಮಾಶಂಕರ ಪಾಟೀಲ, ಕೈಲಾಸ ಸ್ವಾಮಿ, ಮನೋಹರ ಮದರಿ,ವಸಂಗಣ್ಣ ಹೊಸಮನಿ, ಬೀರಪ್ಪ ಪೂಜಾರಿ, ಜಯರಾಮ ನರಿಬೋಳ, ಸುರೇಶ ಹಳ್ಳಿ, ಗಂಗಣ್ಣ ತಳವಾರ ಸೇರಿದಂತೆ ಅನೇಕರಿದ್ದರು.

ಸರ್ಕಲ್ ಇನ್‌ಸ್ಪೆಕ್ಟರ್‌ ರಾಜೇಸಾಬ ನದಾಫ್, ಪಿಎಸ್‌ಐ ಗಜಾನಂದ ಬಿರಾದಾರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.