
ಜೇವರ್ಗಿ: ತಾಲ್ಲೂಕಿನ ಸುಕ್ಷೇತ್ರ ಕಟ್ಟಿಸಂಗಾವಿ ಗ್ರಾಮದ ಭೀಮಾ ಬ್ರಿಡ್ಜ್ ಹತ್ತಿರದ ಯಲ್ಲಾಲಿಂಗ ಪ್ರಭು ಮಹಾರಾಜರ ಜಾತ್ರಾ ಮಹೋತ್ಸವ ಜ.14 ರಿಂದ 18 ರವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಜ. 14 ರಂದು ಬುಧವಾರ ಸಂಜೆ 5 ಗಂಟೆಗೆ ತೊಟ್ಟಿಲು ಕಾರ್ಯಕ್ರಮ ಹಾಗೂ ದೀಪೋತ್ಸವ ಕಾರ್ಯಕ್ರಮ ಜರುಗಲಿದೆ. ರಾತ್ರಿ 8 ಗಂಟೆಗೆ ಸಂಗೀತ ಕಾರ್ಯಕ್ರಮ, ಡೊಳ್ಳಿನ ವಾದ್ಯ ಹಾಗೂ ಮಹಾಪ್ರಸಾದ ಜರುಗುವುದು. 15ರಂದು ಬೆಳಿಗ್ಗೆ 9 ರಿಂದ 11ರವರೆಗೆ ಶಿವಯೋಗಿಗಳ ಮೆರವಣಿಗೆ ಮತ್ತು ಗಂಗಾಸ್ನಾನ, ಸಿದ್ದಲಿಂಗೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಂಜೆ 4 ಗಂಟೆಗೆ ಜಿಡಗಾ-ಮುಗಳಖೋಡದ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ಜರುಗುವುದು.
5 ಗಂಟೆಗೆ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಅದ್ದೂರಿ ರಥೋತ್ಸವ ನಡೆಯಲಿದೆ. ರಾತ್ರಿ ನಾಟಕ, ಸಂಗೀತ ಹಾಗೂ ಗೀಗೀ ಪದಗಳ ಕಾರ್ಯಕ್ರಮ ಜರುಗುವುದು. ಜ.16 ರಂದು ಮಧ್ಯಾಹ್ನ 3 ರಿಂದ ಕುಸ್ತಿ ಪಂದ್ಯಗಳು ಜರುಗುವುದು. ಜಾತ್ರಾ ಅಂಗವಾಗಿ ದನಗಳ ಬೃಹತ್ ಜಾತ್ರೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.