ADVERTISEMENT

ಆರಂಭಗೊಳ್ಳದ ಸಂಪೂರ್ಣ ಆನ್‌ಲೈನ್‌ ನೋಂದಣಿ ಸೇವೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 19:30 IST
Last Updated 10 ನವೆಂಬರ್ 2020, 19:30 IST

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಇಲ್ಲಿಯಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಂಪೂರ್ಣ ಆನ್‌ಲೈನ್‌ ನೋಂದಣಿ ಸೇವೆ
ಆರಂಭಗೊಂಡಿಲ್ಲ.

ಪ್ರಾಯೋಗಿಕವಾಗಿ ರಾಜ್ಯದ ಜಾಲ, ತುಮಕೂರು ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ನ.2ರಿಂದ ಈ ಸೇವೆ ಆರಂಭಗೊಂಡಿದೆ. ಚಿಂಚೋಳಿ ಕಚೇರಿಯಲ್ಲಿಯೂ ನ.10ರಿಂದ ಈ ಸೇವೆ ಆರಂಭಿಸಲು ನಿರ್ಧರಿಸಲಾಗಿತ್ತು.

‘ತಾಂತ್ರಿಕ ಸಮಸ್ಯೆ ಪರಿಹರಿಸಲು ಸಂಬಂಧಿಸಿದ ಏಜೆನ್ಸಿಯವರು ಸಮಯಾವಕಾಶ ಕೇಳಿದ್ದರಿಂದನಮ್ಮ ಕಚೇರಿಯಲ್ಲಿ ಈ ಪ್ರಾಯೋಗಿಕ ಯೋಜನೆಯ ಅನುಷ್ಠಾನಕ್ಕೆ ಇನ್ನೂ ಒಂದು ತಿಂಗಳು ಕಾಲಾವಕಾಶವನ್ನು ಇಲಾಖೆ ನೀಡಿದೆ. ಹೀಗಾಗಿ ಈಗಿರುವಂತೆಯೇ ನೋಂದಣಿ ಪ್ರಕ್ರಿಯೆ ನಡೆದಿದೆ’ಎಂದು ಇಲ್ಲಿಯ ಉಪ ನೋಂದಣಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.