ADVERTISEMENT

ಜಿಪಂ ಸಿಇಒ ಡಾ.ಗಿರೀಶ್ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 7 ಮೇ 2022, 2:46 IST
Last Updated 7 ಮೇ 2022, 2:46 IST
ಡಾ.ಗಿರೀಶ್ ಡಿ.ಬದೋಲೆ
ಡಾ.ಗಿರೀಶ್ ಡಿ.ಬದೋಲೆ   

ಕಲಬುರಗಿ: ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ. ಗಿರೀಶ್ ಡಿ. ಬದೋಲೆ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ನಿರ್ಗಮಿತ ಸಿ.ಇ.ಒ ಡಾ.ದಿಲೀಷ್ ಶಶಿ ಅವರು ಅಧಿಕಾರ ಹಸ್ತಾಂತರಿಸಿದರು.

2018ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಡಾ.ಗಿರೀಶ್ ಡಿ. ಬದೋಲೆ ಅವರು ಮಹಾರಾಷ್ಟ್ರದ ಉಸ್ಮಾನಾಬಾದ್‌ ಜಿಲ್ಲೆ ಉಮರ್ಗಾ ತಾಲ್ಲೂಕು ಕಸಗಿ ಗ್ರಾಮದವರು.ಎಂಬಿಬಿಎಸ್ ಪದವೀಧರರಾಗಿರುವ ಅವರು ಒ.ಎನ್.ಜಿ.ಸಿ ಸಂಸ್ಥೆಯ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ADVERTISEMENT

ತುಮಕೂರು ಜಿಲ್ಲೆಯಲ್ಲಿ ಐ.ಎ.ಎಸ್. ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿರುವ ಇವರು, ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಉಪ ವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ನಿರ್ಗಮಿತ ಸಿ.ಇ.ಒ ಡಾ.ದಿಲೀಷ್ ಶಶಿ ಅವರು 15 ತಿಂಗಳು ಕಲಬುರಗಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಎಂಬಿಬಿಎಸ್‌ ಪದವೀಧರರೇ ಸಿಇಒಗಳು; ನಿರ್ಗಮಿತ ಸಿ.ಇ.ಒ ಡಾ.ದಿಲೀಷ್ ಶಶಿ, ಹಿಂದಿನ ಸಿಇಒ ಆಗಿದ್ದ ಡಾ.ಪಿ.ರಾಜಾ ಹಾಗೂ ಈಗ ಅಧಿಕಾರ ಸ್ವೀಕರಿಸಿರುವ ಡಾ. ಗಿರೀಶ್ ಡಿ. ಬದೋಲೆ ಅವರು ಎಂ.ಬಿ.ಬಿ.ಎಸ್ ಪದವೀಧರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.