ADVERTISEMENT

ಅಂಚೆ ಕಚೇರಿಗಳ ಆಧುನೀಕರಣ: ಪಾಂಡೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 8:10 IST
Last Updated 1 ಅಕ್ಟೋಬರ್ 2012, 8:10 IST

ಕುಶಾಲನಗರ: ಗ್ರಾಮಾಂತರ ಪ್ರದೇಶದಲ್ಲಿ 25 ಸಾವಿರಕ್ಕೂ ಹೆಚ್ಚು ಅಂಚೆ ಉಳಿತಾಯ ಖಾತೆ ಹೊಂದಿರುವ ಸುಂಟಿಕೊಪ್ಪ ಹೋಬಳಿಯನ್ನು ಸಂಪೂರ್ಣ ಅಂಚೆ ಉಳಿತಾಯ ಹೋಬಳಿ ಎಂದು ಶನಿವಾರ ಘೋಷಣೆ ಮಾಡಲಾಯಿತು.

ಭಾರತೀಯ ಅಂಚೆಯ ಕೊಡಗು ವಿಭಾಗದ ಆಶ್ರಯದಲ್ಲಿ ಸುಂಟಿಕೊಪ್ಪ ಅಂಚೆ ಕಚೇರಿ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ವಿನೀತ್ ಪಾಂಡೆ ಈ ಘೊಷಣೆ ಮಾಡಿದರು. ಈ ಸಂದರ್ಭದಲ್ಲಿ ನೂರಾರು ಅಂಚೆ ಖಾತೆದಾರರ ನೆರೆದಿದ್ದರು.

ವಿನೀತ್ ಪಾಂಡೆ ಮಾತನಾಡಿ, ಅಂಚೆ ಕಚೇರಿಗಳು ಗ್ರಾಮೀಣರ ಆರ್ಥಿಕ ಅಗತ್ಯ ಪೂರೈಸುತ್ತವೆ. ವಿವಿಧ ಉಳಿತಾಯ ಖಾತೆ ಹೊಂದಿರುವ ಅಂಚೆ ಕಚೇರಿಗಳು ಗ್ರಾಮೀಣ ಜನರ ಜೀವನಾಡಿಗಳಾಗಿವೆ ಎಂದರು.
ಜಿಲ್ಲೆಯಲ್ಲಿ ಸುಂಟಿಕೊಪ್ಪ ಹೋಬಳಿ ಸಂಪೂರ್ಣ ಅಂಚೆ ಹೋಬಳಿಯಾಗಿ ಘೋಷಣೆ ಮಾಡಲಾಗಿದೆ. ಇದು ಸಂತಸದ ವಿಚಾರ. ಅಂಚೆ ಇಲಾಖೆ ಜನಸಾಮಾನ್ಯರ ಬಳಿಗೆ ಮತ್ತಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಇಲಾಖೆ ಹಲವು ವೈವಿಧ್ಯಮಯ ಯೋಜನೆ ಹಮ್ಮಿಕೊಳ್ಳುತ್ತಿದೆ ಎಂದರು.

ಅಂಚೆ ಕಚೇರಿಗಳನ್ನು ಆಧುನೀಕರಣಗೊಳಿಸಿ ಜನರಿಗೆ ಉತ್ತಮ ಸೇವೆ ಒದಗಿಸಲು ಶ್ರಮಿಸಲಾ ಗುತ್ತದೆ ಎಂದು ಅವರು, ಉಳಿತಾಯ ಯೋಜನೆ, ವಿಮೆ ಮತ್ತಿತರ ಸೌಲಭ್ಯಗಳ ಮಾಹಿತಿ ನೀಡಿದರು.

ಜಿಲ್ಲಾ ಅಂಚೆ ಅಧೀಕ್ಷಕ ಕೆ. ರಾಮಲಿಂಗಯ್ಯ ಮಾತ ನಾಡಿ, ಹೆಚ್ಚಾಗಿ ಉಳಿತಾಯ ಖಾತೆ ಮಾಡಿಸುವ ಮೂಲಕ ಸುಂಟಿಕೊಪ್ಪ ಹೋಬಳಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಇದಕ್ಕೆ ಕಾರಣರಾದ ಇಲಾಖೆ ಸಿಬ್ಬಂದಿ ಮತ್ತು ಗ್ರಾಹಕರನ್ನು ಅಭಿನಂದಿಸಿದರು.

ಸುಂಟಿಕೊಪ್ಪ ಪೋಸ್ಟ್ ಮಾಸ್ಟರ್ ಟಿ.ಪಿ. ಶ್ರಿನಿವಾಸ್ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಜಿ. ಪ್ರೇಮಕುಮಾರ್ ಇದ್ದರು. ಸೋಮವಾರಪೇಟೆ ಅಂಚೆ ಉಪ ವಿಭಾಗಾಧಿಕಾರಿ ಮೆಲ್ವಿನ್ ಅರುಣ್ ಲೊಬೊ ಸ್ವಾಗತಿಸಿ, ಶಶಿಕಲ ವಂದಿಸಿದರು. ಎನ್.ಎಸ್. ಅಶೋಕ್, ರಶ್ಮಿ ನಿರೂಪಿಸಿದರು.

ಸಮಾರಂಭದಲ್ಲಿ ಸಣ್ಣ ಉಳಿತಾಯ ಖಾತೆದಾ ರರಿಗೆ ಕೊಡಗು ಅಂಚೆ ವಿಭಾಗದ ಅಧೀಕ್ಷಕ ಕೆ. ರಾಮಲಿಂಗಯ್ಯ `ಪಾಸ್ ಬುಕ್~ ವಿತರಿಸಿದರು.

ಸಿಬ್ಬಂದಿಗೆ ಅಭಿನಂದನೆ: ಸುಂಟಿಕೊಪ್ಪ ಹೋಬಳಿ ಯನ್ನು ಸಂಪೂರ್ಣ ಅಂಚೆ ಉಳಿತಾಯ ಹೋಬಳಿ ಯಾಗಿ ಪರಿವತಿಸಲು ಶ್ರಮಿಸಿದ ಸುಂಟಿಕೊಪ್ಪ ಅಂಚೆ ಕಚೇರಿ ಸಿಬ್ಬಂದಿಗಳಾದ ಎನ್.ಎಸ್. ಅಶೋಕ್,ಎಸ್.ಕೆ. ಪ್ರಭಾವತಿ, ಎ.ಎಂ. ನರಸಿಂಹ, ಕೆ.ಬಿ. ಶಶಿಕಲಾ, ಎನ್.ಡಿ. ಧನ್ಯ, ಬಿ.ಕೆ. ರಂಗಸ್ವಾಮಿ ಅವರನ್ನು ಅಭಿನಂದಿಸಲಾಯಿತು. ಹೋಬಳಿ ವ್ಯಾಪ್ತಿಯ ಅಂಚೆ ನೌಕರರಾದ ಧರ್ಮೇದ್ರ, ಎಚ್.ಕೆ. ಶಿವಣ್ಣ (ಅತ್ತೂರು ನಲ್ಲೂರು), ಸಿ.ಕೆ. ಗಣಪತಿ (ಅಂದಗೋವೆ), ಬಿ.ಬಿ. ಜಿನ್ನಪ್ಪ, ಕೆ.ಆರ್. ನಾರಾಯಣ (ಹರದೂರು), ಮೋಹಿನಿಕುಮಾರಿ (ಹೊರೂರು), ವಿ.ಎಸ್. ಶಿವಕುಮಾರ್, ಎನ್.ಟಿ. ರಮೇಶ್ ( 7ನೇ ಹೊಸಕೋಟೆ), ಕೆ.ವಿ. ಪದ್ಮಾವತಿ (ಕೆ.ವಿ. ಬೈಚನ್ನಳ್ಳಿ), ಕೆ.ಎಂ. ಸತೀಶ್, ಶೇಕ್ ಅಹಮದ್ (ಕೆದಕಲ್), ಬಿ.ಬಿ. ಉಮಾವತಿ, ಪಿ.ಆರ್. ಸಲೀನ್ (ಕೊಡಗರಹಳ್ಳಿ), ಎನ್.ಆರ್. ಮುರುಳೀಧರ್ (ಮತ್ತಿಕಾಡು), ಡಿ.ಎನ್. ಜಗನ್ನಾಥ್ (ನಾಕೂರು ಶಿರಂಗಾಲ), ಬಿ.ಎಸ್. ಮೀನಾಕ್ಷಿ, ಟಿ.ಎಸ್. ಪುಷ್ಪಲತಾ (ಉಲುಗುಲಿ) ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.