ಶನಿವಾರಸಂತೆ: ಹುಟ್ಟುಹಬ್ಬದ ಚಾಕಲೇಟು ತಿಂದ 40 ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಗುರುವಾರ ಇಲ್ಲಿಯ ಪವಿತ್ರ ಹೃದಯ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ನಡೆದಿದೆ.
6ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹುಟ್ಟುಹಬ್ಬದ ಪ್ರಯುಕ್ತ ತರಗತಿಯ ಸಹಪಾಠಿಗಳಿಗೆಲ್ಲ ಚಾಕಲೇಟುಗಳನ್ನು ಹಂಚಿದಳು. ಅದನ್ನು ತಿಂದ ತಕ್ಷಣ 4-5 ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡರು.
ಇತರ ವಿದ್ಯಾರ್ಥಿಗಳೂ ವಾಂತಿ ಬರುತ್ತದೆ ಎಂದಿದ್ದರಿಂದ ತಕ್ಷಣ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಸ್ಥಳೀಯ ಸಮುದಾಯ ಆರೋಗ್ಯಕೇಂದ್ರಕ್ಕೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಯಿತು. ಸುದ್ದಿ ತಿಳಿದ ಕೆಲ ಪೋಷಕರು ಆರೋಗ್ಯಕೇಂದ್ರಕ್ಕೆ ದೌಡಾಯಿಸಿದರು. ಎಲ್ಲ ವಿದ್ಯಾರ್ಥಿಗಳಿಗೂ ಮೂಸುಂಬೆ ಹಣ್ಣು ಸುಲಿದು ಕೊಡಲಾಯಿತು. ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಮಹದೇವಪ್ಪ `ಮಕ್ಕಳೆಲ್ಲರಿಗೂ ಚುಚ್ಚುಮದ್ದು ನೀಡಲಾಗಿದ್ದು; ಕ್ಷೇಮವಾಗಿದ್ದಾರೆ~ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.