ADVERTISEMENT

ನಲ್ಲಿಯಲ್ಲಿ ಚರಂಡಿ ನೀರು ಸರಬರಾಜು!

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 10:08 IST
Last Updated 20 ಏಪ್ರಿಲ್ 2013, 10:08 IST

ಕುಶಾಲನಗರ: ಪಟ್ಟಣದ ಎಳನೇ ವಾರ್ಡಿನಲ್ಲಿ ಕುಡಿಯಲು ಹಾಗೂ ಮನೆ ಬಳಕೆಗೆ ಚರಂಡಿ ನೀರೇ ಗತಿ!

ಇದೇನು ಚರಂಡಿ ನೀರು ಸರಬರಾಜು ಮಾಡಲಾಗುತ್ತಿದೆಯೇ? ಎಂದು ಆಶ್ಚರ್ಯ ಪಡಬೇಡಿ. ಪಟ್ಟಣದ ಏಳನೇ ವಾರ್ಡಿನ ಯಾವುದೇ ಮನೆ ನಲ್ಲಿಯ ನೋಡಿದರೂ ಅದರಲ್ಲಿ ಕುಡಿಯುವ ನೀರಿಗಿಂತ ಹೆಚ್ಚಾಗಿ ಚರಂಡಿ ನೀರೇ ಬರುತ್ತದೆ.

ಒಂದು ವಾರದಿಂದ ಏಳನೇ ವಾರ್ಡಿನ ಎಲ್ಲ ಮನೆಗಳಿಗೆ ನಲ್ಲಿಗಳ ಮೂಲಕ ಚರಂಡಿ ನೀರು ಪೂರೈಕೆಯಾಗುತ್ತಿದೆ. ಕಡು ಕಪ್ಪು ಬಣ್ಣ ಗಬ್ಬು ವಾಸನೆಯಿಂದ ಕೂಡಿದ ನೀರು ಪೂರೈಕೆಯಾಗುತ್ತಿದ್ದು, ಈ ಕುರಿತು ಒಂದು ವಾರದ ಹಿಂದೆಯೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.

ಮನೆಗಳಿಗೆ ಪೂರೈಕೆಯಾಗುವ ನಲ್ಲಿಯ ಪೈಪು ಯಾವುದೋ ಜಾಗದಲ್ಲಿ ತುಂಡಾಗಿರುವುದರಿಂದ ಚರಂಡಿ ನೀರು ಪೂರೈಕೆಯಾಗುತ್ತಿದೆ. ಇದರಿಂದ ಮನೆಯೆಲ್ಲ ವಾಸನೆ ಬರುತ್ತಿದ್ದು, ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ ಎಂದು ನಿವಾಸಿಗಳಾದ ಉಸ್ಮಾನ್, ಹಾಗೂ ವಿಜಯಲಕ್ಷ್ಮಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.